ವಾಷಿಂಗ್ ಟನ್: ಚೀನಾ ಎದುರು ನಿಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಏಕೈಕ ವಿಶ್ವ ನಾಯಕನೆಂದರೆ ಅದು ಭಾರತದ ಪ್ರಧಾನಿ ನರೇಂದ್ರ ಮೋದಿ ಎಂದು ಅಮೆರಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಕುರಿತು ಅಮೆರಿಕ ಈ ವರೆಗೂ ಮೌನವಾಗಿದ್ದರೂ, ಆ ಯೋಜನೆಯ ವಿರುದ್ಧ ನಿಲ್ಲುವ ಸಾಮರ್ಥ್ಯ ಇರುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ಅಮೆರಿಕದ ತಜ್ಞರೊಬ್ಬರು ಹೇಳಿದ್ದಾರೆ.
ಸೆಂಟರ್ ಆನ್ ಚೀನೀಸ್ ಸ್ಟ್ರಾಟಜಿ ನಿರ್ದೇಶಕರಾಗಿರುವ ಮೈಕೆಲ್ ಪಿಲ್ಸ್ಬರಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ್ದು, ಚೀನಾ ಅಧ್ಯಕ್ಷ ಕ್ಸೀ ಜಿನ್ ಪಿಂಗ್ ಅವರ ಮಹತ್ವಕಾಂಕ್ಷಿ ಯೋಜನೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ತಂಡ ಅನೇಕ ಬಾರಿ ಮಾತಬಾಡಿದೆ ಎಂದು ಹೇಳಿದ್ದಾರೆ.
ಒನ್ ಬೆಲ್ಟ್ ಒನ್ ರೋಡ್ ಯೋಜನೆಗೆ ಭಾರತದ ಸಾರ್ವಭೌಮತೆಗೆ ಧಕ್ಕೆ ಉಂಟು ಮಾಡುವಂತಿದ್ದು, ಮೋದಿ ಚೀನಾದ ಮಹತ್ವಾಕಾಂಕ್ಷಿ ಯೋಜನೆಯ ವಿರುದ್ಧ ನಿಂತಿದ್ದಾರೆ. ಆದರೆ ಅಮೆರಿಕ ಸರ್ಕಾರ ಮಾತ್ರ ಮೌನವಾಗಿದೆ ಎಂದು ಮೈಕೆಲ್ ಪಿಲ್ಸ್ಬರಿ ಹೇಳಿದ್ದಾರೆ.
ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಇಂಡೋ-ಪೆಸಿಫಿಕ್ ಕಲರ್ಯತಂತ್ರಕ್ಕೆ ಮೈಕೆಲ್ ಪಿಲ್ಸ್ಬರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.