ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಎಲ್ಇಟಿ, ಜೆಇಎಂನ ವಿಶೇಷ ಉಗ್ರ ವಲಯ ಅಂತ್ಯಗೊಳ್ಳಬೇಕು: ಭಾರತ

ಅಫ್ಘಾನಿಸ್ತಾನದ ಸ್ಥಿರತೆ ಹಾಗೂ ಭದ್ರತೆ ಸುತ್ತಮುತ್ತಲಿನ ಪ್ರದೇಶಕ್ಕೂ ಸಂಬಂಧಪಟ್ಟಿದೆ ಎಂದಿರುವ ಭಾರತ ಪಾಕಿಸ್ತಾನದಲ್ಲಿರುವ ಎಲ್ಇಟಿ, ಜೆಇಎಂ ನ ವಿಶೇಷ ಉಗ್ರರ ವಲಯ ಕೊನೆಗೊಳ್ಳಬೇಕು ಎಂದು ಕರೆ ನೀಡಿದೆ.

ಭಯೋತ್ಪಾದನೆ
Srinivas Rao BV
Updated On : 21 Nov 2017, 3:33 am
ವಿಶ್ವಸಂಸ್ಥೆ: ಅಫ್ಘಾನಿಸ್ತಾನದ ಸ್ಥಿರತೆ ಹಾಗೂ ಭದ್ರತೆ ಸುತ್ತಮುತ್ತಲಿನ ಪ್ರದೇಶಕ್ಕೂ ಸಂಬಂಧಪಟ್ಟಿದೆ ಎಂದಿರುವ ಭಾರತ ಪಾಕಿಸ್ತಾನದಲ್ಲಿರುವ ಎಲ್ಇಟಿ, ಜೆಇಎಂ ನ ವಿಶೇಷ ಉಗ್ರರ ವಲಯ ಕೊನೆಗೊಳ್ಳಬೇಕು ಎಂದು ಕರೆ ನೀಡಿದೆ. 
ಪಾಕಿಸ್ತಾನ ಎಲ್ಇಟಿ, ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗಳನ್ನು ರಕ್ಷಿಸುವುದನ್ನು ಬಿಡಬೇಕು ಎಂದು ವಿಶ್ವಸಂಸ್ಥೆ ಮಹಾಸಭೆಗೆ ಭಾರತದ ಪ್ರತಿನಿಧಿ ಚರ್ಚೆಯೊಂದರಲ್ಲಿ ಹೇಳಿದ್ದಾರೆ. 
ವಿಶೇಷ ಉಗ್ರ ವಲಯಗಳು ಉಗ್ರರು ಹಾಗೂ ಉಗ್ರ ಸಂಘಟನೆಗಳಿಗೆ ಸ್ವರ್ಗದಂತಾಗಿವೆ ಎಂದು ಭಾರತದ ಪ್ರತಿನಿಧಿ ಆತಂಕ ವ್ಯಕ್ತಪಡಿಸಿದ್ದು, ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಯನ್ನು ನಿರ್ನಾಮ ಮಾಡುವುದಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯದ ಸಹಕಾರ ಅಗತ್ಯವಿದೆ ಎಂದು ಹೇಳಿದ್ದಾರೆ. 

Advertisement

Advertisement

ಅಫ್ಘಾನಿಸ್ತಾನದ ಭದ್ರತೆ ಹಾಗೂ ಸ್ಥಿರತೆ ಕೇವಲ ಅಲ್ಲಿಗೆ ಸಂಬಂಧಿಸಿದ ವಿಷಯವಲ್ಲ, ಅಲ್ಲಿನ ಸ್ಥಿರತೆ ಹಾಗೂ ಭದ್ರತೆ ವಿಷಯಗಳು ನೆರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ, ಆದರೆ ಈ ಪ್ರದೇಶದಲ್ಲಿ ಭಯೋತ್ಪಾದನೆ ವಿರುದ್ಧ ಹೋರಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಭಾರತದ ಪ್ರತಿನಿಧಿ ಲಾಲ್ ವಿಶ್ವಸಂಸ್ಥೆಯನ್ನೂ ಟೀಕಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement