ವಿದೇಶ

ಅಮೆರಿಕಾದ ಹಿರಿಯ ಸಂಗೀತಗಾರ ಟಾಮ್ ಪೆಟ್ಟಿ ನಿಧನ

Shilpa D
ಲಾಸ್ ಏಂಜಲೀಸ್:  ಅಮೆರಿಕಾದ ಹಿರಿಯ ರಾಕ್ ಸ್ಟಾರ್ ಟಾಮ್ ಪೆಟ್ಟಿ (66) ನಿಧನರಾಗಿದ್ದಾರೆ. 
ಕ್ಯಾಲಿಫೋರ್ನಿಯಾದ ಮಲಿಬು ನಿವಾಸದಲ್ಲಿ ಹೃದಯಾಘಾತಕ್ಕೊಳಗಾಗಿದ್ದ ಟಾಮ್ ಪೆಟ್ಟಿ ಅವರನ್ನು ಲಾಸ್ ಏಂಜಲೀಸ್ ನ ಯುಸಿಎಲ್ ಎ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೋಮವಾರ ರಾತ್ರಿ ದಾಖಲಿಸಲಾಗಿತ್ತು.  ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇತ್ತೀಚೆಗಷ್ಟೆ ಟಾಮ್ ಪೆಟ್ಟಿ ತಮ್ಮ ಸಂಗೀತ ಪಯಣದ 40ನೇ ವರ್ಷದ ವರ್ಷಾಚರಣೆ ಮಾಡಿದ್ದರು. ಟಾಮ್ ಸತ್ತ ಸುದ್ದಿಯನ್ನು ಅವರ ಸಂಗೀತ ಅಭಮಾನಿಗಳು ಒಪ್ಪಿಕೊಳ್ಳಲು ಸಿದ್ಧವಿರಲಿಲ್ಲ, ಆದರೆ ಸಿಬಿಎಸ್ನ್ಯೂಸ್  ಟಾಮ್ ಸಾವಿನ ಬಗ್ಗೆ ಅಧಿಕೃತ  ಹೇಳಿಕೆ ರೀಲೀಸ್ ಮಾಡಿತ್ತು. 
SCROLL FOR NEXT