ಅಮೆರಿಕದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್
ಗುರುತ್ವಾಕರ್ಷಣೆ ತರಂಗಗಳ ಕುರಿತು ಸಂಶೋಧನೆಗಾಗಿ ಅಮೆರಿಕದ ಮೂವರು ವಿಜ್ಞಾನಿಗಳಾದ ರೇನರ್ ವೀಸ್,....
ಸ್ಟಾಕ್ಹೋಮ್: ಗುರುತ್ವಾಕರ್ಷಣೆ ತರಂಗಗಳ ಕುರಿತು ಸಂಶೋಧನೆಗಾಗಿ ಅಮೆರಿಕದ ಮೂವರು ವಿಜ್ಞಾನಿಗಳಾದ ರೇನರ್ ವೀಸ್, ಬ್ಯಾರಿ ಬೈಷ್, ಕಿಪ್ ತೋರ್ನ್ವ ಅವರಿಗೆ 2017ರ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಲಭಿಸಿದೆ.
ಗುರುತ್ವಾಕರ್ಷಣೆ ತರಂಗಗಳ ಕುರಿತ ಸಂಶೋಧನೆಯಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಕ್ಕಾಗಿ ರೇನರ್ ವೀಸ್ ಅವರಿಗೆ ಪ್ರಶಸ್ತಿ ಮೊತ್ತದಲ್ಲಿ ಅರ್ಧ ಹಣ ಹಾಗೂ ಉಳಿದಿಬ್ಬರು ಉಳಿದರ್ಧ ಹಣ ಹಂಚಿಕೊಳ್ಳಲಿದ್ದಾರೆ.
ಗುರುತ್ವಾಕರ್ಷಣೆ ತರಂಗಗಳ ಕುರಿತಂತೆ ಅಲ್ಬರ್ಟ್ ಐನ್ಸ್ಟೈನ್ ಮೊದಲ ಬಾರಿಗೆ ಪರಿಕಲ್ಪನೆಯನ್ನು ನೀಡಿದ್ದರು.
ಖ್ಯಾತ ವಿಜ್ಞಾನಿ ಅಲ್ಪ್ರೆಡ್ ನೊಬಲ್ ಅವರ ನೆನಪಿಗಾಗಿ ಪ್ರತಿವರ್ಷ ವಿಜ್ಞಾನ, ಕಲೆ, ಸಾಹಿತ್ಯ, ಶಾಂತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುತ್ತದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.