ಪಾಕಿಸ್ತಾನ ಪ್ರಧಾನಿ 
ವಿದೇಶ

ಅಮೆರಿಕಾದ ಮೇಲಿನ ಅವಲಂಬನೆಯ ದಿನಗಳು ಮುಗಿದವು: ಪಾಕಿಸ್ತಾನ ಪ್ರಧಾನಿ

ಪಾಕಿಸ್ತಾನ ಮಿಲಿಟರಿ ಅಗತ್ಯತೆಗಳಿಗೆ ಅಮೆರಿಕ ಮೇಲೆ ಅವಲಂಬಿತವಾಗಿರುವ ದಿನಗಳು ಮುಗಿದಿವೆ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕನ್ ಅಬ್ಬಾಸಿ ಹೇಳಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನ ಮಿಲಿಟರಿ ಅಗತ್ಯತೆಗಳಿಗೆ ಅಮೆರಿಕ ಮೇಲೆ ಅವಲಂಬಿತವಾಗಿರುವ ದಿನಗಳು ಮುಗಿದಿವೆ ಎಂದು ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕನ್ ಅಬ್ಬಾಸಿ ಹೇಳಿದ್ದಾರೆ. 
ಭಯೋತ್ಪಾದನೆ ವಿರುದ್ಧ ಇಡೀ ವಿಶ್ವ ನಡೆಸುತ್ತಿರುವ ಸಮರದಲ್ಲಿ ಪಾಕಿಸ್ತಾನದ ಪ್ರಯತ್ನವೂ ಇದೆ ಎಂಬುದನ್ನು ವಿಶ್ವ ಸಮುದಾಯ ಗುರುತಿಸಬೇಕು ಎಂದು ಅರಬ್ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಪಾಕ್ ಪ್ರಧಾನಿ ಹೇಳಿದ್ದಾರೆ. ಒಂದು ಮೂಲದ ಬಾಗಿಲು ಮುಚ್ಚಿದರೆ ನಾವು ಮತ್ತೊಂದು ಮೂಲವನ್ನು ಹುಡುಕಬೇಕಾಗುತ್ತದೆ. ಹೆಚ್ಚು ಖರ್ಚು ವೆಚ್ಚಗಳು ತಗುಲಿದರೂ ಸಹ ಭಯೋತ್ಪಾದನೆ ವಿರುದ್ಧ ನಾವು ಹೋರಾಟ ನಡೆಸುತ್ತೇವೆ ಎಂದು ಅಬ್ಬಾಸಿ ತಿಳಿಸಿದ್ದಾರೆ. 
ಪಾಕ್ ಸೇನೆಯಲ್ಲಿ ಪ್ರಮುಖವಾದ ಅಮೆರಿಕದ ಶಸ್ತ್ರಾಸ್ತ್ರಗಳು ಇದ್ದು ಅವುಗಳೊಂದಿಗೆ ಬೇರೆ ದೇಶಗಳ ಶಸ್ತ್ರಾಸ್ತ್ರಗಳೂ ಇದೆ, ಚೀನಾ ಹಾಗೂ ಯೂರೋಪಿಯನ್ ವ್ಯವಸ್ಥೆ ಹೊಂದಿರುವ ಶಸ್ತ್ರಾಸ್ತ್ರಗಳೂ ನಮ್ಮಲ್ಲಿ ಇವೆ ಇತ್ತೀಚೆಗಷ್ಟೇ ರಷ್ಯಾದ ಹೆಲಿಕಾಫ್ಟರ್ ಗಳನ್ನೂ ಖರೀದಿಸಿದ್ದೇವೆ ಎಂದು ಹೇಳಿದ್ದಾರೆ. 
ಇದೇ ವೇಳೆ ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕೆ ರಚಿಸಿರುವ ಹೊಸ ನೀತಿಯಲ್ಲಿ ಭಾರತವನ್ನೂ ಸೇರಿಸಿರುವುದರ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಅಬ್ಬಾಸಿ, ಪಾಕಿಸ್ತಾನ-ಅಮೆರಿಕ ದ್ವಿಪಕ್ಷೀಯ ಸಂಬಂಧದಲ್ಲಿ ಭಾರತವನ್ನು ಮಧ್ಯತರುವುದರಿಂದ ಏನನ್ನೂ ಪರಿಹರಿಸುವುದಿಲ್ಲ ಪ್ರಮುಖವಾಗಿ ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಯೂ ಆಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್