9 ವರ್ಷದ ಬಾಲಕಿಯ ಮೇಲೆ ಕುಳಿತ 145 ಕೆಜಿ ಮಹಿಳೆ, ಬಾಲಕಿ ಸಾವು!
ನ್ಯೂ ಯಾರ್ಕ್: ಅಮೆರಿಕದ ಫ್ಲೋರಿಡಾ ದಲ್ಲಿ 145 ಕಿಲೋ ತೂಕದ ಮಹಿಳೆ 9 ವರ್ಷದ ತನ್ನ ಸೋದರ ಸಂಬಂಧಿ ಯ ಮೇಲೆ ಕುಳಿತ ಪರಿಣಾಮ ಆ ಮಗು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವರದಿ ಆಗಿದೆ.
64 ವರ್ಷದ ವೆರೋನಿಕಾ ಪೋಸ್ಸಿ, ಮಗುವಿನ ಸಾವಿಗೆ ಕಾರಣವಾಗಿದ್ದು ಇದೀಗ ಕೊಲೆ ಆರೋಪ ಎದುರಿಸುತ್ತಿದ್ದಾರೆಂದು ವಾಷಿಂಗ್ ಟನ್ ಪೋಸ್ಟ್ ವರದಿ ಮಾಡಿದೆ.
ಸೋದರ ಸಂಬಂಧಿಯಾದ ಡೆರಿಕ್ ಲಿಂಡ್ಸೆ ತನ್ನೊಂದಿಗೆ ಅಸಭ್ಯ ವಾಗಿ ವರ್ತಿಸಿದ್ದು ಅದಕ್ಕೆ ಆಕೆಗೆ ಶಿಕ್ಷೆ ನೀಡುವ ಸಲುವಾಗಿ ತಾನು ಅವನ ಮೇಲೆ ಕುಳಿತಿದ್ದಾಗಿ ತನಿಕಾಧಿಕಾರಿಗಳಿಗೆ ಪೋಸ್ಸಿ ತಿಳಿಸಿದ್ದಾರೆ.
ಲಿಂಡ್ಸೆ ಮೇಲೆ ಪೋಸ್ಸಿ ಕುಳಿತ ಕೆಲವು ಕ್ಷಣ ಆಕೆಗೆ ಉಸಿರಾಡಲು ಆಗಿರಲಿಲ್ಲ. ಪೋಸ್ಸಿ ಅವಳ ಮೇಲಿಂದ ಏಳುವಾಗ ಆಕೆ ಪ್ರಜ್ನೆ ತಪ್ಪಿದ್ದಳು ಎಂದು ಎಸ್ಕಾಂಬಿಯಾ ಕೌಂಟಿ ಷರೀಫ್ ಆಫೀಸ್ ನ ವರದಿ ಹೇಳಿದೆ.
ಮೂರು ಅಡಿ ಎತ್ತರದ ಮತ್ತು 33 ಕಿಲೋ ತೂಕವನ್ನು ಹೊಂದಿದ್ದ ಲಿಂಡ್ಸೆ, ಪೋಸ್ಸಿ ಯ ತೂಕದಲ್ಲಿ ನಾಲ್ಕನೇ ಒಂದು ಭಾಗದಷ್ಟಿದ್ದಳೆಂದು ಎಂದು ವರದಿ ಹೇಳಿದೆ.
ಫ್ಲೋರಿಡಾದ ಪೆನ್ಸಕೋಲಾದ ಮನೆಯಲ್ಲಿ ಕಳೆದ ವಾರ ಈ ಘಟನೆ ಸಂಭವಿಸಿದೆ.
ಲಿಂಡ್ಸೆ ತಾಯಿ, ಗ್ರೇಸ್ ಸ್ಮಿತ್ ತನ್ನ ಮಗಳು ಅಶಿಸ್ತಿನಿಂದ ನಡೆದುಕೊಳ್ಳುತ್ತಿದ್ದಳು.ಅವಳನ್ನು ಸರಿಯಾದ ದಾರಿಯಲ್ಲಿ ನಡೆಸಲು ತಾನು ಪೋಸ್ಸಿ ಯ ಸಹಾಯ ಕೇಳಿದ್ದಾಗಿ ತನಿಖಾಧಿಕಾರಿಗೆ ತಿಳಿಸಿದ್ದಾರೆ.
ಪೋಸ್ಸಿ ಮಗುವಿನ ಮೇಲೆ ಎಷ್ಟು ಕಾಲ ಕುಳಿತಿದ್ದಳೆನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics