ವಿದೇಶ

ನಾವು ಕೇವಲ ಸುಧಾರಣೆಗಳನ್ನು ತರುತ್ತಿಲ್ಲ, ಭಾರತವನ್ನು ಪರಿವರ್ತಿಸುತ್ತಿದ್ದೇವೆ: ಮಯನ್ಮಾರ್ ನಲ್ಲಿ ಮೋದಿ

Srinivas Rao BV
ಮಯಾನ್ಮಾರ್: ಮಯಾನ್ಮಾರ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಅಲ್ಲಿರುವ ಭಾರತೀಯರ ಸಮುದಾಯವನ್ನುದ್ದೇಶಿಸಿ ಮಾತನಾಡಿದ್ದು, ಭಾರತ ಸರ್ಕಾರ ಕೇವಲ ಸುಧಾರಣೆಗಳನ್ನು ಮಾತ್ರ ತರುತ್ತಿಲ್ಲ. ಭಾರತವನ್ನು ಪರಿವರ್ತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. 
ಜನತೆಯ ನಡುವಿನ ಸಂಬಂಧ ಬೆಸೆಯುವುದೇ ನಮ್ಮ ಬಾಂಧವ್ಯದ ಶಕ್ತಿಯಾಗಿದೆ. ಬೌದ್ಧಮತ, ಬ್ಯುಸಿನೆಸ್, ಬಾಲಿವುಡ್, ಭರತನಾಟ್ಯ, ಬರ್ಮಾ ಟೀಕ್ ಹಾಗೂ ಭರವಸೆ ಈ 5 ಬಿ ಗಳು ಭಾರತ-ಮಯನ್ಮಾರ್ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಬುನಾದಿಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. 
ಜಾಗತಿಕ ಮಟ್ಟದಲ್ಲಿ ಭಾರತವನ್ನು ಈಗ ಶಕ್ತಿಶಾಲಿ ನಾಯಕನ ರೀತಿಯಲ್ಲಿ ನೋಡಲಾಗುತ್ತಿದೆ. 2017 ರಲ್ಲಿ ಭಾರತ ನೆರೆಯ ರಾಷ್ಟ್ರಗಳ ಸಹಾಯಕ್ಕಾಗಿ ದಕ್ಷಿಣ ಏಷ್ಯಾ ಸ್ಯಾಟಲೈಟ್ ನ್ನು ಉಡಾವಣೆ ಮಾಡಿತ್ತು, ನೆರೆಯವರಿಗೆ ಸಹಾಯ ಮಾಡುವಾಗ ನಾವು ಅವರ ಪಾಸ್ಪೋರ್ಟ್ ಬಣ್ಣವನ್ನು ಕೇಳುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 
SCROLL FOR NEXT