ಮೆಕ್ಸಿಕೋ: ಅಮೆರಿಕದ ಮೆಕ್ಸಿಕೋ ನಗರದಲ್ಲಿ ಸಂಭವಿಸಿದ್ದ ಭಾರಿ ಭೂಕಂಪನದಲ್ಲಿ ಈ ವರೆಗೂ ಸಾವನ್ನಪ್ಪಿದವರ ಸಂಖ್ಯೆ 61ಕ್ಕೆ ಏರಿಕೆಯಾಗಿದೆ.
ಮೆಕ್ಸಿಕೋದ ಪಿಜಿಜಪಾನ್ ಪ್ರದೇಶದ 123 ಕಿ.ಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, ಭೂಕಂಪನದ ತೀವ್ರತೆಗೆ ಕೇಂದ್ರೀಯ ಮೆಕ್ಸಿಕೋ ನಗರದ ಹಲವು ಕಟ್ಟಡಗಳು ಧರೆಗುರುಳಿವೆ. ಪರಿಣಾಮ ಅವಶೇಷಗಳ ಅಡಿಯಲ್ಲಿ ಸಿಲುಕಿ ಈ ವರೆಗೂ ಸುಮಾರು 61 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಈ ಪೈಕಿ ಚಿಯಾಪಸ್, ಟಬಾಸ್ಕೋ ಹಾಗೂ ಒಕ್ಸಾಕಾ ನಗರಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪನದ ತೀವ್ರತೆಗೆ ಇದೇ ಜುಷಿತಾನ್ ನಲ್ಲಿ ಹಲವು ಕಟ್ಟಡಗಳು ಬಿರುಕುಗೊಂಡಿದ್ದು, ಹೊಟೆಲ್ ಗಳು, ಬಾರ್ ಮತ್ತು ಟೌನ್ ಹಾಲ್ ಒಂದು ಹಾನಿಗೀಡಾಗಿದೆ ಎಂದು ತಿಳಿದುಬಂದಿದೆ.
ಒಕ್ಸಾಕಾ ನಗರವೊಂದರಲ್ಲೇ ಸುಮಾರು 41 ಮಂದಿ ಸಾವನ್ನಪ್ಪಿದ್ದು, ಚಿಯಾಪಸ್ ನಲ್ಲಿ 12 ಹಾಗೂ ಟಬಾಸ್ಕೋ ನಗರದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡನೇ ದಿನವೂ ಮೆಕ್ಸಿಕೋ ನಗರದಲ್ಲಿ ಕಟ್ಟಡಗಳ ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಕೇಂದ್ರ ಅಭಿಪ್ರಾಯಪಟ್ಟಿರುವಂತೆ 1985ರ ಬಳಿಕ ಮೆಕ್ಸಿಕೋದಲ್ಲಿ ಸಂಭವಿಸಿದ ಪ್ರಬಲ ಭೂಕಂಪನ ಇದಾಗಿದೆ ಎಂದು ಹೇಳಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos