ವಾಷಿಂಗ್ಟನ್: ಅಕ್ರಮವಾಗಿ ಮಾದಕ ದ್ರವ್ಯ ಉತ್ಪಾದಿಸುವ ಹಾಗೂ ಸಾಗಣೆ ಮಾಡುವ 21 ದೇಶಗಳ ಪಟ್ಟಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ಸೇರ್ಪಡೆಗೊಳಿಸಿದ್ದಾರೆ.
ಟ್ರಂಪ್ ಅವರ ಪಟ್ಟಿಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮ್ಯಾನ್ಮಾರ್, ಬಹಾಮಾಸ್, ಬೆಲೈಝ್, ಬೊಲಿವಿಯ, ಕೊಲಂಬಿಯಾ, ಡಾಮಿನಿಕರನ್ ರಿಪಬ್ಲಿಕ್, ಇಕ್ವೆಡಾರ್ ಗ್ವಾಟೆಮಾಲ, ಎಲ್ ಸಾಲ್ವಡಾರ್, ಹೈಟಿ, ಹಾಂಡುರಸ್, ಜಮೈಕ, ಕಾಸ್ತರಿಕಾ, ಈಕ್ವೆಡಾರ್, ಲಾವೋಸ್, ಮೆಕ್ಸಿಕೋ, ನಿಕರಾಗುವಾ, ಪನಾಮ, ಪೆರು, ವೆನೆಜುವೆಲಾ ದೇಶಗಳಿವೆ.
ಪಟ್ಟಿಯಲ್ಲಿ ಪಾಕಿಸ್ತಾನ, ಆಫ್ಘಾನಿಸ್ತಾನ ದೇಶಗಳು ಅತೀ ಹೆಚ್ಚು ಮಾದಕ ದ್ರವ್ಯ ವಸ್ತುಗಳನ್ನು ಉತ್ಪಾದನೆ ಮಾಡುವ ಹಾಗೂ ಸರಬರಾಜು ಮಾಡುವ ದೇಶಗಳಾಗಿವೆ ಎಂದು ಹೇಳಲಾಗಿದೆ.
ಸರ್ಕಾರವೊಂದು ಕಾನೂನುಗಳ ಮೂಲಕ ಮಾದಕ ದ್ರವ್ಯ ವಸ್ತುಗಳ ವಿರುದ್ಧ ಸಮರ ಸಾರಿದರೂ, ಈ ದಂಧೆ ನಡೆಯಲು ಭೌಗೋಲಿಕ, ವಾಣಿಜ್ಯ ಮತ್ತು ಆರ್ಥಿಕ ಅಂಶಗಳು ಹೇಗೆ ಕಾರಣವಾಗುತ್ತವೆ ಎಂಬುದು ಈ ಪಟ್ಟಿ ತಯಾರಿಸಿರುವುದರ ಹಿಂದಿನ ಉದ್ದೇಶವಾಗಿದೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.