ಆಂಗ್ ಸಾನ್ ಸೂಕಿ 
ವಿದೇಶ

ಜಗತ್ತು ಏನು ಬೇಕಾದರೂ ತಿಳಿಯಲಿ, ದೇಶದ ರಕ್ಷಣೆ ಮುಖ್ಯ: ರೊಹಿಂಗ್ಯಾ ಮುಸ್ಲಿಮರ ಕುರಿತು ಮೌನ ಮುರಿದ ಸೂಕಿ

ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ತನ್ನ ಮೊದಲ ಭಾಷಣದಲ್ಲಿ ರಾಖೈನ್ ರಾಜ್ಯದಲ್ಲಿ ಉಂಟಾಗಿರುವ ರೋಹಿಂಗ್ಯಾ ಬಿಕ್ಕಟ್ಟನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ನೇಪಿಡಾ: ರೊಹಿಂಗ್ಯಾ ಜಗತ್ತಿನ ದೃಷ್ಟಿಕೋನ ಏನೇ ಇರಲಿ..ಆದರೆ ನಮಗೆ ದೇಶದ ರಕ್ಷಣೆ ಮುಖ್ಯ ಎಂದು ಮಯನ್ಮಾರ್ ನಾಯಕಿ ಆಂಗ್ ಸಾನ್ ಸೂಕಿ ಮಂಗಳವಾರ ಹೇಳಿದ್ದಾರೆ.
ರೊಹಿಂಗ್ಯಾ ಮುಸ್ಲಿಮರ ಸಾಮೂಹಿಕ ಪಲಾಯನ ಕುರಿತಂತೆ ಇದೇ ಮೊದಲ ಬಾರಿಗೆ  ಮೌನ ಮುರಿದಿರುವ ಸೂಕಿ ಟಿವಿಮಾಧ್ಯಮದಲ್ಲಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದರು.
"4 ಲಕ್ಷ  ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದಾರೆ. ಜನಾಂಗೀಯ ಸಮಸ್ಯೆಯಿಂದ ನಮ್ಮ ರಾಷ್ಟ್ರಕ್ಕೆ ಜಾಗತಿಕವಾಗಿ ಕೆಟ್ಟ ಹೆಸರು ಬರುತ್ತಿದೆ" ಎಂದಿದ್ದಾರೆ.

ಮಯನ್ಮಾರ್ ನಿಂದ ಪಲಾಯನ ಮಾಡಿದ 410,000 ರೋಹಿಂಗ್ಯಾ ಮುಸ್ಲಿಮರಲ್ಲಿ ಎಷ್ಟು ಮಂದಿ ದೇಶಕ್ಕೆ ಮರಳಲಿದ್ದಾರೆಂದು ಈಗಲೇ ಹೇಳಲು ಸಾಧ್ಯವಿಲ್ಲ. ಆದರೆ ಮಯನ್ಮಾರ್ ಅಲ್ಲಿ ವಾಸಿಸಲು ಬಯಸುವ ಮುಸ್ಲಿಂ ಜನಾಂಗದ ಹಕ್ಕುಗಳ ವಿಷಯದಲ್ಲಿ ವಿನಾಶಕಾರಿ ಚರ್ಚೆಗೆ ಈಗ ನಮ್ಮ ದೇಶ ಗ್ರಾಸವಾಗಿದೆ.

ಮಯನ್ಮಾರ್ ಸೈನ್ಯವು ಈ ಹಿಂದೆ ಭಯೋತ್ಪೊಆದಕರೊದನೆ ನಂಟು ಹೊಂದಿದ್ದ ರೋಹಿಂಗ್ಯಾಗಳನ್ನು ದೇಅದಿಂದ ಹೊರ್ದೂಡುವುದಾಗಿ ಹೇಳಿತ್ತು. ಆದರೆ ನಾವೆಲ್ಲಿಯೂ ರೋಹಿಂಗ್ಯಾಗಳನ್ನು ರಾಷ್ಟ್ರದಿಂದ ಹೊರಹಾಕುತ್ತೇವೆ ಎಂಡು ಅಧಿಕೃತ ಹೇಳಿಕೆ ನೀಡಿರಲಿಲ್ಲ.

ಆದರೆ ವಿಶ್ವ ಸಂಸ್ಥೆಯು ಮಾಯನ್ಮಾರ್ ರೋಹಿಂಗ್ಯಾ ಹಳ್ಳಿಗಳ ಮೇಲೆ ವಿನಾಕಾರಣ ಸೈನಿಕರನ್ನು ನುಗ್ಗಿಸಿ ಅವರನ್ನು ಹಳ್ಳಿಯಿಂದ ಓಡಿಸಿದ್ದಲ್ಲದೆ ಅವರ ಗುಡಿಸಲನ್ನು, ವಸತಿಯನ್ನೂ ನಾಶಪಡಿಸಿದೆ ಎಂಡು ಆರೋಪಿಸಿದೆ.

ಕಳೆದ ಆಗಸ್ಟ್ ನಲ್ಲಿ ಯಾರು ಭಯೋತ್ಪಾದಕರೊದನೆ ಸಂಪರ್ಕ ಹೊಂದಿದ್ದರೋ ಅಂತಹಾ ರೋಹಿಂಗ್ಯಾ ಮುಸ್ಲೀಮರ ವಸತಿ ಮೇಲೆ ಸೈನ್ಯ ದಾಳಿ ನಡೆಸಿತ್ತು.

ಈ ಧಾಳಿಯಿಂದ ನೊಂದ ಸಾವಿರಾರು ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು ಮತ್ತು ವಿಶ್ವದ ಅತಿ ದೊಡ್ಡ ನಿರಾಶ್ರಿತರ ಶಿಬಿರದಲ್ಲಿ ಒಂದಾದ ರೋಹಿಂಗ್ಯಾ ನಿರಾಶ್ರಿತರ ಶಿಬಿರವು ಅಲ್ಲಿ ನಿರ್ಮಾಣವಾಗಿದೆ

ಇನ್ನು 30,000 ಜನಾಂಗೀಯ ರಾಖೈನ್ ನ ಬೌದ್ಧರು ಮತ್ತು ಹಿಂದೂಗಳು ಕೂಡ ಪಲಾಯನ ಮಾಡಿದ್ದಾರೆ- ಅರಾಕನ್ ರೋಹಿಂಗ್ಯಾ ಸಾಲ್ವೇಶನ್ ಆರ್ಮಿ (ಎಆರ್ ಎಸ್ಎ) ಆಗಸ್ಟ್ 25ರ ದಾಳಿಯಲ್ಲಿ ಮಾಯನ್ಮಾರ್ ಸೈನ್ಯದ ಸ್ಪಷ್ಟ ಗುರಿ ಆಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT