ವಿದೇಶ

ಭೀಕರ ಅಣ್ವಸ್ತ್ರ ದಾಳಿ ಮಾಡಿ ಅಮೆರಿಕ ನಿರ್ನಾಮ ಮಾಡಿಬಿಡುತ್ತೇವೆ: ಉತ್ತರ ಕೊರಿಯಾ ಉದ್ಧಟತನ

Srinivasamurthy VN

ಪ್ಯೋಂಗ್ಯಾಂಗ್: ವಿಶ್ವಸಂಸ್ಥೆಯಲ್ಲಿ ಉತ್ತರ ಕೊರಿಯಾ ವಿರುದ್ಧ ದಾಳಿ ನಡೆಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿಡಿಕಾರಿದ ಬೆನ್ನಲ್ಲೇ ಅಮೆರಿಕಕ್ಕೆ ತಿರುಗೇಟು ನೀಡಿರುವ ಉತ್ತರ ಕೊರಿಯಾ ನಮ್ಮ ಅಣ್ವಸ್ತ್ರಗಳ ಮೂಲಕ  ಭೀಕರ ದಾಳಿ ಮಾಡಿ ಇಡೀ ಅಮೆರಿಕವನ್ನೇ ನಿರ್ನಾಮ ಮಾಡಿ ಬಿಡುತ್ತೇವೆ ಎಂದು ಉತ್ತರ ಕೊರಿಯಾ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಉತ್ತರ ಕೊರಿಯಾ ಸರ್ಕಾರದ ಮುಖವಾಣಿ ಕೆಸಿಎನ್‌ಎ ಸುದ್ದಿವಾಹಿನಿ ವರದಿ ಮಾಡಿದ್ದು, "ಶತ್ರುಗಳು ‘ಪ್ರಚೋದನೆಯ ತುಸು ಲಕ್ಷಣ’ ತೋರಿಸಿದರೂ ಅವರ ನೆಲೆಗಳ ಮೇಲೆ ಮುಂಚಿತ ದಾಳಿ ನಡೆಸಿ ಅವರನ್ನು ಮುಗಿಸಿ  ಬಿಡಲು ತಾನು ಸಿದ್ಧ ಎಂದು ಹೇಳಿದೆ. ‘‘ಅತ್ಯಂತ ಕ್ಲಿಷ್ಠ ಸಮಸ್ಯೆಗಳು ಮತ್ತು ವಿಶ್ವಸಮುದಾಯದ ಕಿರುಕುಳಗಳ ಹೊರತಾಗಿಯೂ ಡಿಪಿಆರ್‌ಕೆ (ಉತ್ತರ ಕೊರಿಯ) ಅತ್ಯಂತ ಶಕ್ತಿಶಾಲಿ ಪರಮಾಣು ಶಕ್ತಿ ದೇಶವಾಗಿ ಹೊರಹೊಮ್ಮಿದೆ.  ದಿಗ್ಬಂಧನಗಳು, ಒತ್ತಡ ಮತ್ತು ಯುದ್ಧಕ್ಕೆ ನಾವು ಅಂಜುವುದಿಲ್ಲ’’ ಎಂದು ಉತ್ತರ ಕೊರಿಯಾ ಸರ್ಕಾರವನ್ನು ಉಲ್ಲೇಖಿಸಿ ಕೆಸಿಎನ್‌ಎ ವರದಿ ಮಾಡಿದೆ.

"ಅಮೆರಿಕ ಸಂಘರ್ಷ ಮತ್ತು ಯುದ್ಧವನ್ನು ಬಯಸಿದರೆ... ಅದು ಭಯಾನಕ ಪರಮಾಣು ದಾಳಿಯನ್ನು ಎದುರು ನೋಡಬೇಕಾಗುತ್ತದೆ ಹಾಗೂ ತನ್ನ ರಣೋತ್ಸಾಹ ತನದಿಂದಲೇ ಅದು ಸರ್ವನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.  ಅಂತೆಯೇ ತನ್ನ ಮೇಲೆ ಹೊಸದಾಗಿ ಅಮೆರಿಕ ವಿಧಿಸಬೇಕು ಎಂದು ಹೇಳಿರುವು ದಿಗ್ಬಂಧನಗಳ ಕುರಿತು ಪ್ರತಿಕ್ರಿಯೆ ನೀಡಿರುವ ಕಿಸಿಎನ್ ಎ ಈ ದಿಗ್ಭಂಧನಗಳು ಹಾಸ್ಯಾಸ್ಪದ ಮತ್ತು ನಿರ್ಲಕ್ಷ್ಯದ ದಿಗ್ಬಂಧನ ಎಂದು ಕಿಡಿಕಾರಿದೆ.  "ಶತ್ರುಗಳು ವಿಧಿಸಿರುವ ಅತ್ಯಂತ ಕಠಿಣ ದಿಗ್ಬಂಧನಗಳು ಮತ್ತು ತಡೆಗಳ ಹೊರತಾಗಿಯೂ ಉತ್ತರ ಕೊರಿಯ ತಾನು ಬಯಸಿದ ಎಲ್ಲವನ್ನೂ ಪಡೆದುಕೊಂಡಿದೆ. ಹೊಸ ‘ದಿಗ್ಬಂಧನ’ಗಳ ಮೂಲಕ ಡಿಪಿಆರ್‌ಕೆ ತನ್ನ ನಿಲುವನ್ನು  ಬದಲಾಯಿಸುವಂತೆ ಮಾಡಬಹುದು ಎಂದು ಭಾವಿಸುವುದು ಅಮೆರಿಕಜ ಹಗಲುಗನಸಾಗಿದೆ’’ ಎಂದು ವ್ಯಂಗ್ಯವಾಡಿದೆ.

ಈ ಹಿಂದೆ ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಉತ್ತರ ಕೊರಿಯವು ಅಮೆರಿಕ ಅಥವಾ ಅದರ ಮಿತ್ರ ದೇಶಗಳ ಮೇಲೆ ದಾಳಿ ನಡೆಸಿದರೆ ಆ ದೇಶವನ್ನು  ಪುಡಿಗೈಯಲಾಗುವುದು ಎಂದು ಟ್ರಂಪ್ ಹೇಳಿದ್ದರು.

SCROLL FOR NEXT