ರೋಮ್: ಇಟಲಿ ರಾಜಧಾನಿ ರೋಮ್ ನಲ್ಲಿ ನಡೆಯುತ್ತಿದ್ದ ಏರ್ ಶೋ ವೇಳೆ ಸೇನೆಗೆ ಸೇರಿದ ಯುದ್ಧ ವಿಮಾನವೊಂದು ದುರಂತಕ್ಕೀಡಾಗಿದ್ದು, ಯುದ್ಥ ವಿಮಾನದ ಪೈಲಟ್ ಸಾವನ್ನಪ್ಪಿರುವ ಘಟನೆ ಕ್ಯಾಮೆರಾಗಳಲ್ಲಿ ದಾಖಲಾಗಿದೆ.
ನಿನ್ನೆ ರೋಮ್ ನಲ್ಲಿ ಏರ್ಪಡಿಸಲಾಗಿದ್ದ ಏರ್ ಶೋನಲ್ಲಿ ಇಟಲಿ ಸೇನೆಗೆ ಸೇರಿದ ಫೈಟರ್ ಜೆಟ್ ವೊಂದು ಆಗಸದಿಂದ ಕೆಳಗೆ ಧುಮುಕುವ ಸಾಹಸ ಪ್ರದರ್ಶನ ಮಾಡುತ್ತಿತ್ತು. ಈ ವೇಳೆ ವಿಮಾನ ಪೈಲಟ್ ನ ನಿಯಂತ್ರಣ ಕಳೆದುಕೊಂಡು ನೇರ ಸಮುದ್ರಕ್ಕೆ ಬಿದ್ದಿದೆ. ಈ ದುರಂತಕ್ಕೆ ಏರ್ ಶೋನಲ್ಲಿ ಭಾಗವಹಿಸಿದ್ದ ಸಾವಿರಾರು ಮಂದಿ ಪ್ರೇಕ್ಷಕರು ಸಾಕ್ಷಿಯಾಗಿದ್ದು, ಹಲವರು ಈ ದೃಶ್ಯಾವಳಿಗಳನ್ನು ತಮ್ಮ ಕ್ಯಾಮೆರಾದಲ್ಲೆ ಸೆರೆ ಹಿಡಿದಿದ್ದಾರೆ.
ವಿಮಾನ ದುರಂತಕ್ಕೀಡಾಗುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಸಮುದ್ರಕ್ಕಿಳಿದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಸ್ತುತ ಫೈಟರ್ ಜೆಟ್ ವಿಮಾನದ ಪೈಲಟ್ ನ ಮೃತದೇಹವನ್ನು ಸಿಬ್ಬಂದಿ ಪತ್ತೆ ಮಾಡಿದ್ದಾರೆ ಎಂದು ಇಟಲಿ ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅಂತೆಯೇ ದುರಂತಕ್ಕೆ ಕಾರಣ ತಿಳಿದುಬಂದಿಲ್ಲ. ದುರಂತ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics