ವಿದೇಶ

ಜಪಾನ್ ಪ್ರಧಾನಿ ಶಿಂಜೊ ಆಬೆ ಅವರಿಂದ ಸಂಸತ್ತು ಕೆಳಮನೆ ವಿಸರ್ಜನೆ, ಮುಂದಿನ ತಿಂಗಳು ಮತ್ತೆ ಚುನಾವಣೆ

Raghavendra Adiga
ಟೋಕಿಯೋ : ಜಪಾನ್‌ ಪ್ರಧಾನಿ ಶಿಂಜೋ ಅಬೆ ದೇಶದ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ.
ಸಂಸತ್ತು ಕೆಳಮನೆಯ ವಿಸರ್ಜನೆಯಿಂದ ಮತ್ತೆ ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆ ಆಗಬೇಕಿದೆ. ಮುಂದಿನ ಅ.22ರಂದು ಈ ಚುನಾವಣೆ ನಡೆಯಲಿದೆ.
ಸಂಸತ್ತಿನ ಸಭಾಧ್ಯಕ್ಷರಾಗಿರುವ ತದಮೋರಿ ಒಶಿಮಾ ಕೆಳಮನೆ ವಿಸರ್ಜನೆ ಕುರಿತಂತೆ ಪ್ರಧಾನಿ ಹೇಳಿಕೆಯನ್ನು ಸಂಸತ್ತಿನಲ್ಲಿ ಓದಿ ಹೇಳಿದರು. 
ಶಿಂಜೋ ಅಬೆ, ಲಿಬರಲ್‌ ಡೆಮೋಕ್ರಾಟಿಕ್‌ ಪಕ್ಷದ ಮೇಲೆ ತಮ್ಮ ಹಿಡಿತವನ್ನು ಬಲಪಡಿಸಿಕೊಳ್ಳುವ ಮೂಲಕ ಮುಂದಿನ ವರ್ಷ ಮುಗಿಯಲಿರುವ ತಮ್ಮ ಪ್ರಧಾನಿ ಅಧಿಕಾರ ಅವಧಿಯನ್ನು ಮತ್ತೆ ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದೇ ಕಾರಣದಿಂದ ಈಗ ಸಂಸತ್ತಿನ ಕೆಳಮನೆಯನ್ನು ವಿಸರ್ಜಿಸಿದ್ದಾರೆ ಎನ್ನಲಾಗಿದೆ.
ಜಪಾನಿನ ಉಭಯ ಸದನಗಳ ಸಂಸತ್ತಿಗೆ ಇನ್ನೂ ಒಂದು ವರ್ಷ ಅವಧಿ ಬಾಕಿ ಇರುವಾಗಲೇ ಪ್ರಧಾನಿ ಅಬೆ ತಮ್ಮ ರಾಜಕೀಯ ಭವಿಷ್ಯವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಳಮನೆಯನ್ನು ವಿಸರ್ಜಿಸಿರುವುದು ಪ್ರಧಾನಿಯ ಆತ್ಮವಿಶ್ವಾಸದ ಕುರುಹು ಎನ್ನಲಾಗಿದೆ
ಟೋಕಿಯೋ ರಾಜ್ಯಪಾಲ ಯುರಿಕೋ ಕೊಯಿಕೆ ಈ ವಾರ ಹೊಸ ಪಕ್ಷವೊಂದನ್ನು ಪ್ರಾರಂಭಿಸಲಿದ್ದು ಇದು ಆಳುವ ಪಕ್ಷಕ್ಕೆ ಹೊಸ ಸವಾಲಾಗಿದೆ. 
ಯುರಿಕೋ ಅವರ "ಪಾರ್ಟಿ ಆಫ್ ಹೋಪ್‌' ಕೆಲವು ಮತದಾರರಲ್ಲಿ ಹೊಸ ಉತ್ಸಾಹವನ್ನು ತುಂಬಿದೆ ಜತೆಗೆ ವಿರೋಧ ಪಕ್ಷದಲ್ಲಿನ ಬಂಡಾಯ ಎದ್ದ ಸಂಸದರ, ಶಾಸಕರು ಸಹ ಈ ಹೊಸ ಪಕ್ಷಕ್ಕೆ ಸೇರುವ ಸಾಧ್ಯತೆ ಇದೆ.
SCROLL FOR NEXT