ಲಾಸ್ ಏಂಜಲೀಸ್: ಪ್ಲೆಬಾಯ್ ಮ್ಯಾಗಜಿನ್ ಸ್ಥಾಪಕ, ಇತ್ತೀಚೆಗಷ್ಟೇ ನಿಧನರಾದ ಹಗ್ ಹೆಫ್ನರ್ ಅವರ ಕಿರಿಯ ಪುತ್ರ ತನ್ನ ತಂದೆಯ ಪರಂಪರೆಯನ್ನು ಮುಂದುವರೆಸುವ ಯೋಜನೆ ಹೊಂದಿದ್ದಾರೆ.
ಪ್ಲೆಬಾಯ್ ಎಂಟರ್ ಪ್ರೈಸಸ್ ನ ಮುಖ್ಯ ಕ್ರಿಯಾಶೀಲ ಅಧಿಕಾರಿ ಕೂಪರ್ ಹಫ್ನರ್, ಮಾಧ್ಯಮ ಕಂಪೆನಿ ಹೆಚ್ ಒಪಿಯ ಸ್ಥಾಪಕ ಮತ್ತು ಕ್ಯಾಲಿಫೋರ್ನಿಯಾ ರಾಜ್ಯ ಮಿಲಿಟರಿ ಮೀಸಲು ಪಡೆಯ ಸದಸ್ಯ ಕೂಡ ಹೌದು.
ತನ್ನ ತಂದೆಯ ಸುಮಾರು 40 ದಶಲಕ್ಷ ಡಾಲರ್ ಸಂಪತ್ತಿನ ಒಡೆತನವನ್ನು ಪುತ್ರ ಪಡೆದುಕೊಳ್ಳುವ ಸಾಧ್ಯತೆಯಿದೆ.
ಕೂಪರ್ ಹಫ್ನರ್ ಹ್ಯಾರಿ ಪಾಟರ್ ಚಿತ್ರದ ನಟಿ ಸ್ಕಾರ್ಲೆಟ್ಟ್ ಬೈರ್ನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.