ಸಂಗ್ರಹ ಚಿತ್ರ 
ವಿದೇಶ

ಭಾರತದಲ್ಲಿ ಚುನಾವಣಾ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧ: ಮಾರ್ಕ್ ಜುಕರ್​ಬರ್ಗ್

2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.

ವಾಷಿಂಗ್ಟನ್​: 2019ರಲ್ಲಿ ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಸಮಗ್ರತೆ ಕಾಪಾಡಲು ಫೇಸ್ ಬುಕ್ ಬದ್ಧವಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಹೇಳಿದ್ದಾರೆ.
ಫೇಸ್​ಬುಕ್ ಬಳಕೆದಾರರ ದತ್ತಾಂಶ ಬಳಸಿಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆ(2016)ಯಲ್ಲಿ ಟ್ರಂಪ್ ಪರ ಕೆಲಸ ಮಾಡಿದ ಆರೋಪವನ್ನು ಫೇಸ್​ಬುಕ್ ಕಾರ್ಯವ್ಯಾಪ್ತಿಯಲ್ಲಿ ಬರುವ ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ಸಂಸ್ಥೆ ಎದುರಿಸುತ್ತಿದೆ. ಈ ಸಂಬಂಧ ಅಮರಿಕದ ಸೆನೆಟ್​ನ ನ್ಯಾಯಾಂಗ ಮತ್ತು ವಾಣಿಜ್ಯ ಸಮಿತಿಗಳ ಮುಂದೆ ಮಂಗಳವಾರ ನಡೆದ ವಿಚಾರಣೆಗೆ ಜುಕರ್​ಬರ್ಗ್​ ಹಾಜರಾಗಿದ್ದರು. ಈ ವೇಳೆ ಮಾತನಾಡಿದ ಜುಕರ್ ಬರ್ಗ್, 'ಭಾರತದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯ ಮಹತ್ವ ತಿಳಿದಿದೆ, ಈ ಹಿನ್ನೆಲೆಯಲ್ಲಿ ಚುನಾವಣಾ ಸಮಗ್ರತೆಯನ್ನು ಕಾಪಾಡಲು ಫೇಸ್​ಬುಕ್​ ಸಂಸ್ಥೆ ಬದ್ಧವಾಗಿದೆ ಎಂದು ಹೇಳಿದ್ದಾರೆ. 
ಅಂತೆಯೇ ಈ ವರ್ಷ ಮತ್ತು ಮುಂದಿನ ವರ್ಷ ಭಾರತ ಸೇರಿದಂತೆ ಹಂಗೇರಿ, ಪಾಕಿಸ್ತಾನ, ಮೆಕ್ಸಿಕೋ ಮತ್ತು ಬ್ರೆಜಿಲ್​ನಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಫೇಸ್​ಬುಕ್​ನಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಈಗಾಗಲೇ ಫೇಸ್​ಬುಕ್​ ನಕಲಿ ಖಾತೆಗಳನ್ನು ಗುರುತಿಸಲು ಆರ್ಟಿಫೀಷಿಯಲ್​ ಇಂಟಲಿಜೆನ್ಸ್​ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದೆ. 2016ರಲ್ಲಿ ಇದ್ದ ಸುರಕ್ಷತಾ ವ್ಯವಸ್ಥೆಗಿಂತಲೂ ಹೆಚ್ಚಿನ ಸುರಕ್ಷತೆಯನ್ನು ಈಗ ನೀಡಲಾಗುತ್ತಿದೆ. ಫೇಸ್​ಬುಕ್​ ಸಂಸ್ಥೆಯನ್ನು ನಾನೇ ಸ್ಥಾಪಿಸಿದ್ದು, ಹಾಗಾಗಿ ಅಲ್ಲಿ ನಡೆಯುವ ಪ್ರತಿಯೊಂದು ವಿಷಯಗಳಿಗೂ ನಾನೇ ಜವಾಬ್ದಾರನಾಗಿರುತ್ತೇನೆ. ದತ್ತಾಂಶ ದುರ್ಬಳಕೆ ನನ್ನ ತಪ್ಪು, ಹಾಗಾಗಿ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಜುಕರ್​ಬರ್ಗ್​ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ