ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ನವಾಜ್ ಷರೀಫ್ ಗೆ ಭಾರೀ ಹಿನ್ನಡೆಯಾಗುವ ರೀತಿಯಲ್ಲಿ, ಪಾಕಿಸ್ತಾನ ಸುಪ್ರೀಂ ಕೋರ್ಟ್ ಇಂದು ಮಹತ್ವದ ಆದೇಶ ನೀಡಿ ನವಾಜ್ ಷರೀಫ್ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಇನ್ನು ಮುಂದೆ ಸಾರ್ಜನಿಕ ಜೀವನದ ಹುದ್ದೆ ನಿಭಾಯಿಸುವಂತಿಲ್ಲ ಎಂದು ಹೇಳಿದೆ.
ಪಾಕಿಸ್ತಾನ ಸಂವಿಧಾನ ವಿಧಿ 62(1)(f) ನಡಿ ನವಾಜ್ ಷರೀಫ್ ಗೆ ಸಾರ್ವಜನಿಕ ಹುದ್ದೆ ವಹಿಸುವುದಕ್ಕೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಆಸಿಫ್ ಸಯೀದ್ ಕೋಸಾ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಸಂವಿಧಾನ ವಿಧಿ 62(1)(f)ನಡಿ ನವಾಜ್ ಷರೀಫ್ ಗೆ ನಿರಾಕರಣೆ ಘೋಷಿಸಿದೆ.
ಪನಾಮಾ ಪೇಪರ್ ಸೋರಿಕೆ ಪ್ರಕರಣದಲ್ಲಿ ನವಾಜ್ ಷರೀಫ್ ವಿರುದ್ಧ ಆರೋಪ ಕೇಳಿಬಂದಿದೆ.