ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್
ಫ್ರಾನ್ಸ್: ರಾಸಾಯನಿಕ ದಾಳಿಗೆ ಪ್ರತಿಯಾಗಿ ಸಿರಿಯಾ ಮೇಲೆ ಯುದ್ಧ ಘೋಷಣೆ ಮಾಡಿದ್ದ ಅಮೆರಿಕಾ ಹಾಗೂ ಬ್ರಿಟನ್ ದೇಶಗಳೊಂದಿಗೆ ಫ್ರಾನ್ಸ್ ಕೂಡ ಕೈಜೋಡಿಸಿದ್ದು, ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗುತ್ತಿದೆ ಎಂದು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರು ಶನಿವಾರ ಹೇಳಿದ್ದಾರೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮುಗ್ದ ಜನರ ಮೇಲೆ ರಾಸಾಯನಿಕ ಶಸ್ತ್ರಾಸ್ತ್ರಗಳಿಂದ ನಡೆಸಲಾಗುತ್ತಿರುವ ದಾಳಿಗಳನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಅಮೆರಿಕ ಹಾಗೂ ಬ್ರಿಟನ್ ಜೊತೆಗೆ ಫ್ರಾನ್ಸ್ ಕೂಡ ಕೈಜೋಡಿಸಿದ್ದು, ಸಿರಿಯಾದಲ್ಲಿರುವ ರಾಸಾಯನಿಕ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಗುರಿಯಾಗಿರಿಸಿಕೊಕಂಡು ದಾಳಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿರಿಯಾದ ಆಡಳಿತದ ಬಗ್ಗೆಯಿದ್ದ ಸತ್ಯಗಳು ಹಾಗೂ ಜವಾಬ್ದಾರಿಗಳಲ್ಲಿ ಅನುಮಾನಗಳಿಲ್ಲ. ಏ.7 ರಂದು ಡೌಮಾದಲ್ಲಿ ನಡೆಸಲಾಗದ ರಾಸಾಯನಿಕ ದಾಳಿಯಲ್ಲಿ ಹಲವಾರು ಮುಗ್ದ ಜನರು ಸಾವನ್ನಪ್ಪಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಯುದ್ಧದ ಕರೆಗೆ ಕೈಜೋಡಿಸಲಾಗಿದೆ ಎಂದು ತಿಳಿಸಿದ್ದಾರೆ.
2017ರ ಮೇ ತಿಂಗಳಿನಲ್ಲಿಯೇ ಫ್ರಾನ್ಸ್ ನೀಡಿದ್ದ ರೆಡ್ ಲೈನ್'ನ್ನು ಸಿರಿಯಾ ದಾಟಿತ್ತು. ಹೀಗಾಗಿ ಅಮೆರಿಕ ಹಾಗೂ ಬ್ರಿಟನ್ ರಾಷ್ಟ್ರಗಳ ಯುದ್ಧದೊಂದಿಗೆ ಕೈಜೊಡಿಸುವಂತೆ ಫ್ರಾನ್ಸ್ ಸೇನಾಪಡೆಗೆ ಸೂಚನೆ ನೀಡಿದ್ದೆ ಎಂದಿದ್ದಾರೆ.