ಬಶರ್ ಅಲ್ ಅಸ್ಸಾದ್, 
ವಿದೇಶ

ಕೆಲ ವಿದೇಶಿ ಕ್ಷಿಪಣಿಗಳು ಸಿರಿಯಾದ ಅಸಾದ್‌ರನ್ನು ಅಲ್ಲಾಡಿಸಲು ಸಾಧ್ಯವಿಲ್ಲ; ಆತ ಸದ್ದಾಂ ಅಥವಾ ಗಡಾಫಿ ಅಲ್ಲ!

ಸಿರಿಯಾ ಅಧ್ಯಕ್ಷ ಬಷರ್​ ಅಲ್​ ಅಸಾದ್​ ಅವರು ಅಮಾಯಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದಕ್ಕೆ ಪ್ರತೀಕಾರವಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್...

ಚೆನ್ನೈ: ಸಿರಿಯಾ ಅಧ್ಯಕ್ಷ ಬಷರ್​ ಅಲ್​ ಅಸಾದ್​ ಅವರು ಅಮಾಯಕರ ಮೇಲೆ ರಾಸಾಯನಿಕ ಅಸ್ತ್ರ ಪ್ರಯೋಗಿಸಿದ್ದಕ್ಕೆ ಪ್ರತೀಕಾರವಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಜಂಟಿಯಾಗಿ ಮಿಲಿಟರಿ ಕಾರ್ಯಾಚರಣೆ ನಡೆಸಿ ವೈಮಾನಿಕ ದಾಳಿ ನಡೆಸಿದ್ದರು. 
ವೈಮಾನಿಕ ದಾಳಿ ನಂತರ ಅಸ್ಸಾದ್ ತನ್ನ ಇರಾನ್ ಅಧ್ಯಕ್ಷ ಹಸನ್ ರೋಹಾನಿಗೆ ದೂರವಾಣಿ ಕರೆ ಮಾಡಿ ಈ ಆಕ್ರಮಣಶೀಲತೆಯು ಸಿರಿಯಾ ಜನರು ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. 
ಇದೇ ವೇಳೆ ಅಸ್ಸಾದ್ ಬಲಿಷ್ಠ ನಾಯಕ, ಇತರ ಅರಬ್ ಸರ್ವಾಧಿಕಾರಿ ಹೋಸ್ನಿ ಮುಬಾರಕ್ ಅಥವಾ ಮುಮ್ಮರ್ ಗಡ್ಡಾಫಿಯಂತಲ್ಲ, ಅಸ್ಸಾದ್ ಸಿರಿಯನ್ನರ ಬೃಹತ್ ಬಣದಿಂದ ನಿಜವಾದ ಬೆಂಬಲವನ್ನು ನೀಡುತ್ತಾರೆ ಎಂದು ಅಸ್ಸಾದ್ ಹೇಳಿದ್ದಾರೆ. 
ಸಿರಿಯಾದ ಡಮಾಸ್ಕಸ್​ ಹಾಗೂ ಸುತ್ತಮುತ್ತ ಪ್ರದೇಶದ ರಾಸಾಯನಿಕ ಶಸ್ತ್ರಾಸ್ತ್ರಗಳ ಸಂಗ್ರಹದ ಮೇಲೆ ಅಮೆರಿಕ, ಫ್ರಾನ್ಸ್​ ಮತ್ತು ಬ್ರಿಟನ್​ ಯುದ್ಧ ವಿಮಾನಗಳು ದಾಳಿ ಮಾಡಿದ್ದವು. ಸಿರಿಯಾದ ಸರ್ವಾಧಿಕಾರಿ ಅಸ್ಸಾದ್​ ಗೆ ಸೇರಿದ ರಾಸಾಯನಿಕ ಶಸ್ತ್ರಾಸ್ತ್ರ ಸಂಗ್ರಹ ಮತ್ತು ತಯಾರಿಕಾ ಘಟಕಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ. ಈ ಮೂಲಕ ರಾಸಾಯನಿಕ ಶಸ್ತ್ರಾಸ್ತ್ರ ಉತ್ಪಾದನೆ, ಹರಡುವಿಕೆ ಮತ್ತು ಬಳಕೆಯನ್ನು ತಡೆಯುವ ಉದ್ದೇಶ ಅಮೆರಿಕದ್ದಾಗಿತ್ತು. 
ಕಳೆದ ರಾತ್ರಿ ಸಿರಿಯಾ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗಿದೆ. ಇದಕ್ಕೆ ಸಹಕರಿಸಿದ ಹಾಗೂ ಅತ್ಯುತ್ತಮ ಸೇನೆ ಹೊಂದಿರುವ ಫ್ರಾನ್ಸ್ ಮತ್ತು ಬ್ರಿಟನ್ ಗೆ ಧನ್ಯವಾದಗಳು. ನಾವು ಗುರಿ ಸಾಧಿಸಿದ್ದೇವೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT