ಪ್ರಧಾನಿ ನರೇಂದ್ರಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಚಿತ್ರ 
ವಿದೇಶ

ಪರಸ್ಪರ ನಂಬಿಕೆಯ ಕೊರತೆಯಿಂದ ಡೊಕ್ಲಾಮ ಬಿಕ್ಕಟ್ಟು ಉದ್ಬವ - ಚೀನಾ

ಭಾರತ ಮತ್ತು ಚೀನಾ ನಡುವಿನ ಪರಸ್ಪರ ನಂಬಿಕೆಯ ಕೊರತೆಯಿದ ಡೊಕ್ಲಾಮ ಬಿಕ್ಕಟ್ಟು ಉಂಟಾಗಿದೆ ಎಂದು ಚೀನಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

ಬೀಜಿಂಗ್ : ಭಾರತ ಮತ್ತು ಚೀನಾ ನಡುವಿನ  ಪರಸ್ಪರ ನಂಬಿಕೆಯ ಕೊರತೆಯಿದ ಡೊಕ್ಲಾಮ ಬಿಕ್ಕಟ್ಟು ಉಂಟಾಗಿದೆ. ಅನುಕೂಲಕರ ಪರಿಸ್ಥಿತಿ ಸೃಷ್ಟಿಸಿ ಇಬ್ಬರು ಗಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಚೀನಾದ ಹಿರಿಯ ರಾಯಬಾರಿ ಅಧಿಕಾರಿಯೊಬ್ಬರು ಇಂದು ಹೇಳಿದ್ದಾರೆ.

 ಈ ವಾರ ನಿಗದಿಯಾಗಿರುವ  ಪ್ರಧಾನಮಂತ್ರಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್  ನಡುವಣ ಔಪಚಾರಿಕ ಸಭೆಯ ಹಿನ್ನೆಲೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ.

ಕಳೆದ ವರ್ಷ ಸಿಕ್ಕಿಂ ಬಳಿಯ ಡೋಕ್ಲಾಮ ಬಳಿ ಎರಡು ತಿಂಗಳಿಗೂ ಹೆಚ್ಚು ಕಾಲ ಭಾರತ ಹಾಗೂ ಚೀನಾ ಸೈನಿಕರನ್ನು ನಿಯೋಜಿಸುವ ಮೂಲಕ ಕೆಲಕಾಲ ಪರಿಸ್ಥಿತಿ ಬಿಗಡಾಯಿಸುವಂತಾಗಿತ್ತು.

ಉಭಯ ದೇಶಗಳ ನಡುವಣ ಪರಸ್ಪರ ನಂಬಿಕೆಯ ಕೊರತೆಯೇ ಇದಕ್ಕೆ ಕಾರಣವಾಗಿತ್ತು ಎಂದು ಉಪ ವಿದೇಶಾಂಗ ವ್ಯವಹಾರಗಳ ಸಚಿವ ಕಾಂಗ್ ಕ್ಯೂಂಯ್  ಸುದ್ದಿಸಂಸ್ಥೆಯೊಂದಕ್ಕೆ ಹೇಳಿದ್ದಾರೆ.

ಭೇಟಿ ವೇಳೆ ಉಭಯ ದೇಶಗಳ ನಾಯಕರು ಈ ಸಮಸ್ಯೆ ಕುರಿತು ಮಾತನಾಡಬೇಕು, ಪರಸ್ಪರ  ಸಹಕಾರದ ಮೂಲಕ ಗಡಿಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಪರಸ್ಪರ ನಂಬಿಕೆ ಆಧಾರದ ಮೇಲೆ ಸಮಸ್ಯೆ ಬಗೆಹರಿಸಿಕೊಳ್ಳಲು ಉಭಯ ದೇಶಗಳು ಪ್ರಯತ್ನಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಭೇಟಿ ವೇಳೆ ದ್ವಿಪಕ್ಷೀಯ ಸಂಬಂಧ ವೃದ್ಧಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ಕೆಲ  ವಿವಾದಗಳನ್ನು ನಂಬಿಕೆಯಿಂದ ಬಗೆಹರಿಸಿಕೊಂಡು ಧೀರ್ಘಕಾಲದ ಸಮಸ್ಯೆಗೆ ಅಂತ್ಯವಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT