ವಾಷಿಂಗ್ ಟನ್: ಇರಾನ್ ನ ಆರ್ಥಿಕ ಹಾಗೂ ಕೈಗಾರಿಕಾ ಕ್ಷೇತ್ರಗಳ ಮೇಲೆ ನಿರ್ಬಂಧ ಮತ್ತೆ ಪ್ರಾರಂಭವಾಗಲಿದೆ ಎಂದು ಅಮೆರಿಕದ ಶ್ವೇತ ಭವನ ತಿಳಿಸಿದೆ.
ಆ.07 ರಿಂದ ನಿರ್ಬಂಧ ಮತ್ತೆ ಮುಂದುವರೆಯಲಿದ್ದು, ನವೆಂಬರ್ ನಲ್ಲಿ ಮತ್ತಷ್ಟು ನಿರ್ಬಂಧಗಳು ಬರಲಿವೆ. ಮೊದಲ ಹಂತದ ನಿರ್ಬಂಧಗಳು ಆ.07 ರಿಂದ ಪ್ರಾರಂಭವಾಗಲಿದ್ದು, ಇರಾನ್ ಅಮೆರಿಕ ಮೇಲೆ ಅವಲಂಬಿತವಾಗಿರುವ ಬ್ಯಾಂಕ್ ನೋಟುಗಳು, ಕೈಗಾರಿಕೆಗಳಿಗೆ ಬಳಕೆ ಮಾಡಲಾಗುವ ಗ್ರಾಫೈಟ್, ಕಲ್ಲಿದ್ದಲು ಅಲ್ಯುಮಿನಿಯಮ್, ಸ್ಟೀಲ್ ನ್ನು ಅಮೆರಿಕ ನಿರ್ಬಂಧಗಳು ಟಾರ್ಗೆಟ್ ಮಾಡಲಿವೆ.