ಕೆನಡಾದಲ್ಲಿ ಸರಣಿಶೂಟೌಟ್: ಇಬ್ಬರು ಪೋಲೀಸರು, ಇಬ್ಬರು ನಾಗರಿಕರ ದುರ್ಮರಣ 
ವಿದೇಶ

ಕೆನಡಾದಲ್ಲಿ ಸರಣಿ ಶೂಟೌಟ್: ಇಬ್ಬರು ಪೋಲೀಸರು, ಇಬ್ಬರು ನಾಗರಿಕರ ದುರ್ಮರಣ

ಪೂರ್ವ ಕೆನಡಾದಲ್ಲಿ ನಡೆದ ಶೂಟಔಟ್ ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತಿಬ್ಬರು ನಾಗರಿಕರು ಹತರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದೆ.....

ಫ್ರೆಡರಿಕ್ಷನ್(ಕೆನಡಾ): ಪೂರ್ವ ಕೆನಡಾದಲ್ಲಿ ನಡೆದ ಶೂಟಔಟ್ ನಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತಿಬ್ಬರು ನಾಗರಿಕರು ಹತರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಓರ್ವ ಶಂಕಿತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸರಣಿ ಶೂಟೌಟ್ ಘಟನೆ  58,000 ಜನರಿರುವ ಪುಟ್ಟ ನಗರವನ್ನು  ದಿಗ್ಭ್ರಮೆಗೊಳಿಸಿದೆ. ಫ್ರೆಡ್ರಿಕ್ಟನ್ ನಗರದ ಪೋಲೀಸರು ಸಾರ್ವಜನಿಕರು ಮನೆಯಲ್ಲೇ ಉಳಿಯಬೇಕು, ಹೆಚ್ಚು ಹೊತ್ತು ಹೊರಗಿರುವುದು ಸುರಕ್ಷಿತವಲ್ಲ ಎಂದು ಸೂಚನೆ ನಿಡಿದ್ದಾರೆ.\

ಅಲ್ಲದೆ ಸಾಮಾಜಿಕ ಮಾಧ್ಯಮ ಬಳಕೆದಾರರೊಂದಿಗೆ ಪೊಲೀಸರು ಮನವಿ ಮಾಡಿದ್ದು ವದಂತಿಗಳನ್ನು ಹರಡಬಾರದೆಂದು, ಪೋಲೀಸ್ ತನಿಖೆಗೆ ಸಹಕರಿಸಬೇಕೆಂದು ಕೋರಿದ್ದಾರೆ.

ಕೆನಡಾದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಗಿಂತ ಹೆಚ್ಚು ಕಟ್ಟುನಿಟ್ಟಾಗಿದೆ. ಆದರೆ ಇತ್ತೀಚೆಗೆ ಅಕ್ರಮ ಶಸ್ತ್ರಾಸ್ತ್ರಗಳ ಪ್ರಸರಣದಿಂದಾಗಿ ಶೂಟಔಟ್ ಪ್ರಕರಣಗಳು ಹೆಚ್ಚುತ್ತಿದೆ.

ಕೆನಡಾ ಪ್ರಧಾನಿ ಸಂತಾಪ

ಫ್ರೆಡ್ರಿಕ್ಟನ್ ನಲ್ಲಿ ಸಂಭವಿಸಿದ ಸರಣಿ ಶೂಟಔಟ್ ಪ್ರಕರಣದ ಸಂಬಂಧ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡಿಯು ಸಂತಾಪ ಸೂಚಿಸಿದ್ದಾರೆ. "ಫ್ರೆಡ್ರಿಕ್ಟನ್ ಘಟನೆಯು ಒಂದು ಭೀಕರ ಸುದ್ದಿಯಾಗಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT