ವಿದೇಶ

ಆ. 18ಕ್ಕೆ ಪಾಕ್ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ: ಪಿಟಿಐ ಸಂಸದ ಹೇಳಿಕೆ

Raghavendra Adiga
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಎಂದು ಪದಗ್ರಹಣ ಮಾಡಲಿದ್ದಾರೆ ಎಂದು ನಾನಾ ಊಹಾಪೋಹಗಳು ಕೇಳಿಬರುತ್ತಿದ್ದ ಬೆನ್ನಲ್ಲೇ ಆಗಸ್ಟ್​ 18ರಂದು ಮ್ರಾನ್​ ಖಾನ್​ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪಾಕಿಸ್ತಾನ್​ ತೆಹ್ರಿಕ್​ ಎ ಇನ್​ಸಾಫ್ (ಪಿಟಿಐ) ನಾಯಕ, ಸಂಸದ  ಫೈಸಲ್​ ಜಾವೆದ್​ ಹೇಳಿದ್ದಾರೆ.
ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಗೆ ಮೊದಲು ಖಾನ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಊಹಿಸಲಾಗಿತ್ತು. ಆದರೆ, ಆಗಸ್ಟ್ 18 ರಂದು ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂದು ಜಾವೇದ್ ಹೇಳಿದ್ದಾರೆ.
ಪಾಕಿಸ್ತಾನದ ಅಧ್ಯಕ್ಷ ಮಮ್ನೂನ್ ಹುಸೇನ್ ಪಾಕಿಸ್ತಾನದ ಹೊಸ ಪ್ರಧಾನ ಮಂತ್ರಿಯ ಪ್ರಮಾಣವಚನವನ್ನು  ನೆರವೇರಿಸುವ ಸಲುವಾಗಿ ಅವರು ತಮ್ಮ ನಿಗದಿತ ವಿದೇಶೀ ಪ್ರವಾಸವನ್ನು ಮುಂದೂಡಿದ್ದಾರೆ ಎಂದು ಮಾದ್ಯಮ ವರದಿ ತಿಳಿಸಿದೆ.
ಭಾರತ ಹೈಕಮಿಷನರ್-ಇಮ್ರಾನ್ ಭೇಟಿ
ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಆಗಸ್ಟ್ 18ರಂದು ಪ್ರಮಾಣ ಸ್ವೀಕರಿಸಲಿರುವ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನದಲ್ಲಿರುವ ಭಾರತ ಹೈಕಮಿಷನರ್ ಭೇಟಿಯಾಗಿದ್ದು ನಲವತ್ತು ನಿಮಿಷ ಕಾಲ ಮಾತುಕತೆ ನಡೆಸಿದ್ದಾರೆ.
SCROLL FOR NEXT