ವಿದೇಶ

ಭಾರತದ ಲಾಲು ಪ್ರಸಾದ್ ಇಮ್ರಾನ್ ಖಾನ್ ರ ಸಲಹೆಗಾರರಾಗಿರಬೇಕು: ಪಿಪಿಪಿ

Srinivasamurthy VN
ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಅವರಿಗೆ ಭಾರತದ ಲಾಲೂ ಪ್ರಸಾದ್ ಯಾದವ್ ಅವರು ಸಲಹೆಗಾರರಾಗಿರಬೇಕು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಹೇಳಿದೆ.
ಇಮ್ರಾನ್ ಖಾನ್ ಅವರ ಪ್ರಮಾಣವಚನ ಕಾರ್ಯಕ್ರಮ ಮುಕ್ತಾಯವಾದ ಬಳಿಕವೂ ಮತ್ತೆ ಸುದ್ದಿಯಲ್ಲಿದ್ದು, ಪ್ರಮಾಣವಚನದ ವೇಳೆ ಉರ್ದು ಪದಗಳನ್ನು ತಪ್ಪಾಗಿ ಹೇಳಿದ್ದ ಪಾಕ್ ಪ್ರಧಾನಿ ವಿರುದ್ಧ ಟೀಕೆಗಳ ಸುರಿಮಳೆ ಗೈಯ್ಯಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಪೀಪಲ್ಸ್ ಪಕ್ಷದ ಮುಖಂಡ ಸೈಯದ್ ಖುರ್ಷೀದ್ ಶಾ ಅವರು, ಪ್ರಮಾಣವಚನದ ವೇಳೆ ಅವರು ಮಾಡಿದ ಯಡವಟ್ಟುಗಳು ದೇಶದ ಪ್ರಧಾನಿ ಹುದ್ದೆಗೆ ಹೊಂದಿಕೆಯಾಗುವಂತದಲ್ಲ, ಅವರ ಭಾಷಣ ಕೇಳುತ್ತಿದ್ದ ನನಗೆ ಭಾರತದ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ನೆನಪಾದರು. ಬಹುಶಃ ಅವರೇ ಇಮ್ರಾನ್ ಖಾನ್ ಅವರ ಸಲಹೆಗಾರರಾಗಿರಬೇಕು ಎಂದು ಅವರು ವ್ಯಂಗ್ಯ ಮಾಡಿದ್ದಾರೆ.
ಅಂತೆಯೇ ಇಮ್ರಾನ್ ಖಾನ್ ಅವರು ಇಂತಹ ಬೇಜವಾಬ್ದಾರಿ ತನವನ್ನು ದೂರವಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಶನಿವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಮಾಜಿ ಕ್ರಿಕೆಟಿಗ ಹಾಗೂ ಪಿಟಿಐ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದರು.
SCROLL FOR NEXT