ದುಬೈ: ಬಿಸಿ ನೀರಿನಿಂದ ತುಂಬಿದ್ದ ವಾಷಿಂಗ್ ಮಷಿನ್ ಗೆ ಬಿದ್ದು, ನಾಲ್ಕು ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ದುಬೈನಲ್ಲಿ ನಡೆದಿದೆ.
ದುಬೈನ ಎಎಲ್ ರಾವ್ದಾಹ್ ನಲ್ಲಿ ಈ ಘಟನೆ ನಡೆದಿದ್ದು, ಅಜ್ಜಿ ಮನೆಯಲ್ಲಿದ್ದ ಬಾಲಕ ಆಟವಾಡುತ್ತ ಲಾಂಡ್ರಿ ರೂಮ್ ಗೆ ತೆರಳಿದ್ದಾನೆ. ಬಳಿಕ ಅಲ್ಲಿದ್ದ ಫ್ರಂಟ್ ಲೋಡ್ ವಾಷಿಂಗ್ ಮಷಿನ್ ಬಾಗಿಲು ತೆಗೆದು ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ನಂತರ ಮಷಿನ್ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಖಲೀಜ್ ಟೈಮ್ಸ್ ವರದಿ ಮಾಡಿದೆ.
ಮಗುವನ್ನು ಕರೆದುಕೊಂಡು ಹೋಗಲು ತಾಯಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದ್ದು, ಬಾಲಕನ ಅಂಕಲ್ ಕೂಡಲೇ ವಾಷಿಂಗ್ ಮಷಿನ್ ಡೋರ್ ಮುರಿದು ಮಗುವನ್ನು ಹೊರೆ ತೆಗೆದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.