ಸಾಂದರ್ಭಿಕ ಚಿತ್ರ 
ವಿದೇಶ

ನೇಪಾಳ: ನದಿಗೆ ಉರುಳಿ ಬಿದ್ದ ಮಿನಿ ಟ್ರಕ್ , 18 ದುರ್ಮರಣ , 16 ಮಂದಿಗೆ ಗಾಯ

ಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ನೇಪಾಳದಲ್ಲಿ ನಡೆದಿದೆ.

ಕಠ್ಮಂಡು: ಮಿನಿ ಟ್ರಕ್ ಒಂದು ಸುಮಾರು 400 ಮೀಟರ್ ಎತ್ತರದಿಂದ ನದಿಗೆ ಉರುಳಿ ಬಿದ್ದ ಪರಿಣಾಮ 18 ಜನರು ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ  ನೇಪಾಳದಲ್ಲಿ ನಡೆದಿದೆ.

ನುವಾಕೊಟ್ ಜಿಲ್ಲೆಯ ಶಿಕಾರ್ ಬೆಸಿಯಿಂದ ಗೈಯಾಂಗ್ ಪೆಡಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮಿನಿ ಟ್ರಕ್  ದುಪ್ಚೇಶ್ವರ್ ಬಳಿ  ಅಪಘಾತಕ್ಕೊಳಗಾಗಿ  18 ಮಂದಿ ದುರ್ಮರಣ ಹೊಂದಿದ್ದಾರೆ.

ಶುಕ್ರವಾರ ಸಂಜೆ 5 ಗಂಟೆ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು  ನುವಾಕೊಟ್  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಮ್ ಲಾಲ್ ಬಾಟ್ಟರೈ ತಿಳಿಸಿದ್ದಾರೆ.

ಮಿನಿ ಟ್ರಕ್ ನಲ್ಲಿ ಅಂತ್ಯಸಂಸ್ಕಾರವೊಂದಕ್ಕೆ ಹೋಗಿದ್ದ ಪ್ರಯಾಣಿಕರು ವಾಪಾಸ್ಸಾಗುತ್ತಿದ್ದಾಗ ಈ  ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಖಚಿತ ಮಾಹಿತಿ ತಿಳಿದುಬಂದಿಲ್ಲ.  ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನಾಳೆ ಅರ್ಧಕ್ಕೆ ಹಾರಲಿದೆ ತ್ರಿವರ್ಣ ಧ್ವಜ; ದೇಶಾದ್ಯಂತ ಶೋಕಾಚರಣೆ: ಕತಾರ್‌ನ ಮಾಜಿ ಅಮೀರ್ ನಿಧನಕ್ಕೆ PM ಮೋದಿ ಸಂತಾಪ

ಅಮೆರಿಕ ಜೊತೆ ಒಪ್ಪಂದ 'ಮುಗಿದಿದೆ': ಹೊಸ ದಾಳಿಗಳ ಬೆನ್ನಲ್ಲೇ ಇರಾನ್ ಘೋಷಣೆ

ಮಾರುವೇಷ ಯಾಕೆ ಸ್ವಾಮಿ.. ಇದು ಚಿಲ್ಲರೆ ಕಾಲವಲ್ಲ, ಕ್ಯೂಆರ್ ಕೋಡ್ ಕಾಲ: ಸಚಿವ ಸುರೇಶ್‌ಗೆ ಶಾಸಕ ಸುರೇಶ್ ಕುಮಾರ್ ಪಾಠ

'ಊಸರವಳ್ಳಿಯಂತೆ ಬದಲಾಗ್ತಾರೆ': ಹಿಂದಿ ಬರಲ್ಲ ಅಂತ ಪೋಸ್ ಕೊಟ್ಟೋರು, ದೆಹಲಿಯ CJPಯಲ್ಲಿ ಹಿಂದಿಯಲ್ಲೇ ಭಾಷಣ; ನೆಟ್ಟಿಗರು ಗರಂ, Video

'ಮಾ ಇಂಟಿ ಬಂಗಾರಂ' ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ ಕಲೆಕ್ಷನ್! ನಾಯಕಿ ಪ್ರಧಾನ ಚಿತ್ರದ ಯಶಸ್ಸಿನ ಗುಟ್ಟು ಹಂಚಿಕೊಂಡ ಸಮಂತಾ!