ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಭುವನ ಸುಂದರಿ-2018 ಪಟ್ಟ ಫಿಲಿಪೈನ್ಸ್ ಪಾಲು!

ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ ಭುವನ ಸುಂದರಿ ಪಟ್ಟ ಒಲಿದಿದ್ದು, ದಕ್ಷಿಣ ಆಫ್ರಿಕಾ ಹಾಗೂ ವೆನಿಜ್ಯುವೆಲ್ಲಾದ ಸುಂದರಿಯರು ನಂತರದ ಎರಡು ಸ್ಥಾನದಲ್ಲಿದ್ದಾರೆ.

ಕ್ಯಾಟ್ರಿಯಾನಾ ಎಲಿಸಾ ಗ್ರೇ
Srinivas Rao BV
Updated On : 17 Dec 2018, 12:37 pm
ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ  ಭುವನ ಸುಂದರಿ ಪಟ್ಟ ಒಲಿದಿದ್ದು, ದಕ್ಷಿಣ ಆಫ್ರಿಕಾ ಹಾಗೂ ವೆನಿಜ್ಯುವೆಲ್ಲಾದ ಸುಂದರಿಯರು ನಂತರದ ಎರಡು ಸ್ಥಾನದಲ್ಲಿದ್ದಾರೆ. 
ಭಾರತದಿಂದ ಆಯ್ಕೆಯಾಗಿದ್ದ ನೆಹಾಲ್  ಚುದಾಸಮಾ ಟಾಪ್ 20 ಪಟ್ಟಿಯಿಂದ ಹೊರಗುಳಿದಿದ್ದಾರೆ. 2017 ನೇ ಸಾಲಿನ ಭುವನ ಸುಂದರಿ ದಕ್ಷಿಣ ಆಫ್ರಿಕಾದ   ಡೆಮಿ ಲೀ ನೆಲ್-ಪೀಟರ್ಸ್ ಫಿಲಿಪೈನ್ಸ್ ನ ಕ್ಯಾಟ್ರಿಯಾನಾ ಎಲಿಸಾ ಗ್ರೇ  ಗೆ ಕಿರೀಟ ತೊಡಿಸಿದ್ದಾರೆ. ಘೋಷಣೆಗೂ ಮುನ್ನ ಗ್ರೇ ಅವರಿಗೆ ಅವರು ಜೀವನದಲ್ಲಿ ಕಲಿತ ಅತ್ಯಂತ ಮಹತ್ವದ ಪಾಠ ಯಾವುದು ಹಾಗೂ ಭುವನ ಸುಂದರಿಯಾಗಿ ಅದನ್ನು ಹೇಗೆ ಅಳವಡಿಸಿಕೊಳ್ಳುತ್ತೀರಿ ಎಂದು ಕೇಳಲಾಗಿತ್ತು. 
ಪ್ರಶ್ನೆಗೆ ಗ್ರೇ ನೀಡಿದ ಉತ್ತರ ಹೀಗಿತ್ತ: " ನಾನು ಮನಿಲಾದ ಸ್ಲಮ್ ಗಳಿಗಾಗಿ  ಕೆಲಸ ಮಾಡುತ್ತೇನೆ, ಅಲ್ಲಿನ ಜೀವನ ಅತ್ಯಂತ  ದುಃಖಕರವಾದದ್ದು, ನಾನು ಅಲ್ಲಿನ ಜನತೆಯಲ್ಲಿನ ಮುಖದಲ್ಲಿ ಸಂತೋಷ ನೋಡಲು ಇಚ್ಛಿಸುತ್ತೇನೆ. ಭುವನ ಸುಂದರಿಯಾಗಿ ನಾನು ಈ ಸಂದರ್ಭವನ್ನು  ಅಲ್ಲಿನ ಜನತೆಗೆ ಸದುಪಯೋಗವಾಗುವಂಥಹದ್ದನ್ನು ನೀಡಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಜನತೆಗೆ ಒಂದು ವೇಳೆ ನಾನು ಕೃತಜ್ಞರಾಗಿರುವುದನ್ನು ಹೇಳಿಕೊಡುವುದಿದ್ದರೆ ಅದರಿಂದ ಋಣಾತ್ಮಕತೆ ಇಲ್ಲದ ಜಗತ್ತಿನ್ನು ಹೊಂದಿರುತ್ತೇವೆ ಎಂದು ಹೇಳಿದ್ದಾರೆ. 

Advertisement

Advertisement

ಫಿಲಿಪೈನ್ಸ್ ನ ಕ್ಯಾಟ್ರಿಯಾನ ಎಲಿಸಾ ಗ್ರೇ ಮ್ಯೂಸಿಗ್ ಥಿಯರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಲಾ ಕ್ಷೇತ್ರದ ಕಡೆಗೆ ಹೆಚ್ಚು ಒಲವು ಹೊಂದಿದ್ದಾರೆ. ಇನ್ನು ಮೊದಲ ರನ್ನರ್ ಅಪ್ ಆಗಿರುವ ದಕ್ಷಿಣ ಆಫ್ರಿಕಾದ ತಮರಿನ್ ಗ್ರೀನ್ ಸಮಾರಂಭದಲ್ಲಿ ಮಹತ್ಮಾ ಗಾಂಧಿ ಅವರ  ಜಗತ್ತಿನಲ್ಲಿ ನೋಡಬಯಸುವ ಬದಲಾವಣೆ ನೀನೇ ಆಗು ( Be the change you want to see in the world)  ಹೇಳಿಕೆಯನ್ನು ಉಲ್ಲೇಖಿಸಿದ್ದು ವಿಶೇಷವಾಗಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments