ಬರಾಕ್ ಒಬಾಮ 
ವಿದೇಶ

ಸಂತ ಕ್ಲಾಸ್ ವೇಷದಲ್ಲಿ ಮಕ್ಕಳ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಒಬಾಮ, ಮನಕಲಕುವ ದೃಶ್ಯ!

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದರು.

ವಾಷಿಂಗ್ಟನ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಸಂತ ಕ್ಲಾಸ್ ಕ್ಯಾಪ್ ತೊಟ್ಟು ವಾಷಿಂಗ್ಟನ್ ಮಕ್ಕಳ ರಾಷ್ಟ್ರೀಯ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳಿಗೆ ಉಡುಗೊರೆ ಹಂಚಿ ಸಂಭ್ರಮಿಸಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳಿಗೆ, ವೈದ್ಯರಿಗೆ, ಸಿಬ್ಬಂದಿಗೆ ಒಬಾಮ ಕ್ರಿಸ್ಮಸ್ ಹಬ್ಬದ ಶುಭ ಕೋರಿದರು, ಹೊಸ ವರ್ಷದ ಶುಭಾಶಯವನ್ನು ತಿಳಿಸಿದರು.
ಕಷ್ಟದ ಸಂದರ್ಭದಲ್ಲಿ ರಾಷ್ಟ್ರಕ್ಕೆ ನರ್ಸ್ ಗಳು ಮತ್ತು ವೈದ್ಯರ ಅಗತ್ಯತೆ ತುಂಬಾ ಇದೆ. ವೈದ್ಯರು ಮತ್ತು ನರ್ಸ್ ಗಳು ನಮ್ಮನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ ಎಂದು ಒಬಾಮ ಶ್ಲಾಘಿಸಿದರು. ನಮ್ಮ ಜನರಿಗೆ ನಾವು ಶರಣಾಗುವುದು ಹಬ್ಬದ ವಿಶೇಷತೆ ಎಂದರು.
ಮಕ್ಕಳಿದ್ದ ವಾರ್ಡ್ ಗಳಿಗೆ ತೆರಳಿದ ಒಬಾಮ ಮಕ್ಕಳನ್ನು ಅಪ್ಪಿಕೊಂಡು ಆರೋಗ್ಯ ವಿಚಾರಿಸಿದರು. ಅಮೂಲ್ಯ ಉಡುಗೊರೆಗಳನ್ನು ನೀಡಿದರು. ಇನ್ನು ಕುಟುಂಬ ಎಲ್ಲೇ ಇರಲಿ, ನೀವು ಪ್ರೀತಿಸುವವರು ಎಲ್ಲೇ ಇರಲಿ, ಅಲ್ಲೆಲ್ಲ ಕ್ರಿಸ್ಮಸ್ ಇರಲಿದೆ ಎಂದು ಒಬಾಮ ಚಿಕಿತ್ಸೆಗಾಗಿ ಬಂಧುಗಳಿಂದ ದೂರವಿದ್ದ ಬಾಲಕಿಗೆ ಧೈರ್ಯ ತುಂಬಿದರು. ನಂತರ ಬಾಲಕಿಗೆ ಒಬಾಮ ಮೇಕಪ್ ಕಿಟ್ ಮತ್ತು ನೈಲ್ ಪಾಲಿಶ್ ಅನ್ನು ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ: ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಜಾತಿ ನಿಂದನೆ ತಂದೆ-ಮಗನ ವಿರುದ್ಧ ಪ್ರಕರಣ ದಾಖಲು

SCROLL FOR NEXT