ವಿದೇಶ

ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ನಾವು ಮೋದಿ ಸರ್ಕಾರಕ್ಕೆ ತೋರಿಸುತ್ತೇವೆ: ಇಮ್ರಾನ್ ಖಾನ್

Raghavendra Adiga
ಲಾಹೋರ್: ಬಾಲಿವುಡ್ ನಟ ನಾಸಿರುದ್ದೀನ್ ಶಾ ಭಾರತದಲ್ಲಿ ಹೆಚ್ಚುತ್ತಿರುವ ಗುಂಪು ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಪಾಕ್ ಪ್ರಧಾನಿ ಇಮ್ರಾನ್ ಖಾನ್ "ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ನಾವು ಮೋದಿ ಸರ್ಕಾರಕ್ಕೆ ತೋರಿಸುತ್ತೇವೆ" ಎಂದಿದ್ದಾರೆ.
ಉತ್ತರ ಪ್ರದೇಶದ ಬುಲಂದರ್ ಶಹರ್ ಹಿಂಸಾಚಾರ ವೇಳೆ ಪೋಲೀಸ್ ಅಧಿಕಾರಿಯೊಬ್ಬರ ಹತ್ಯೆಯಾಗಿದ್ದ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಂಪು ದಾಳಿಗಳು ಹೆಚ್ಚುತ್ತಿದ್ದ ಬಗ್ಗೆ ಬಾಲಿವುಡ್ ನಟ ಶಾ ಕಳವಳ ವ್ಯಕ್ತಪಡಿಸಿದ್ದರು."ನನ್ನ ಮಕ್ಕಳನ್ನು ನಾನು ಯಾವುದೇ ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನಾಗಿ ಬೆಳೆಸಿಲ್ಲ, ಅವರ ಬಗ್ಗೆ ನನಗೆ ಆತಂಕವಿದೆ" ಎಂದು ಶಾ ಹೇಳಿದ್ದರು
ಪಂಜಾಬ್ ಸರ್ಕಾರದ ನೂರು ದಿನಗಳ ಸಾಧನೆ ಕಾರ್ಯ್ಕರ್ಮ ಉದ್ಘಾಟಿಸಿ ಮಾತನಾಡಿದ ಇಮ್ರಾನ್ ಖಾನ್ ಪಾಕಿಸ್ತಾನದ ಧಾರ್ಮಿಕ ಅಲ್ಪಸಂಖ್ಯಾತರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಳ್ಳುತ್ತದೆ.ಇದು ದೇಶದ ಸ್ಥಾಪಕ ಮಹಮದ್ ಅಲಿ ಜಿನ್ನಾ ಅವರ ದೂರದರ್ಶಿತ್ವದ ನಿಲುವು ಎಂದಿದ್ದಾರೆ.
"ಆಧುನಿಕ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ, ಸಮಾನ ಹಕ್ಕುಗಳಿವೆ ಎನ್ನುವುದನ್ನು ನಮ್ಮ ಸರ್ಕಾರ ಖಚಿತಪಡಿಸುತ್ತದೆ. 
"ನಾವು ಅಲ್ಪಸಂಖ್ಯಾತರನ್ನು ಹೇಗೆ ಕಾಣಬೇಕೆಂದು ಮೋದಿ ಸರ್ಕಾರಕ್ಕೆ ತೋರಿಸಿಕೊಡಲಿದ್ದೇವೆ.ಆದರೆ ಭಾರತದಲ್ಲಿನ ಜನತೆ ಹೇಳುವಂತೆ ಅಲ್ಲಿ ಅಲ್ಪಸಂಖ್ಯಾತದಲ್ಲಿ ಸಮಾನ ನಾಗರಿಕರೆಂದು ಸಹ ಪರಿಗಣಿಸಲಾಗುವುದಿಲ್ಲ" ಖಾನ್ ಹೇಳಿದ್ದಾರೆ.
SCROLL FOR NEXT