ಖಲೆಡಾ ಜಿಯಾ, 
ವಿದೇಶ

ಭ್ರಷ್ಟಾಚಾರ ಪ್ರಕರಣ: ಬಾಂಗ್ಲಾದೇಶ ಮಾಜಿ ಪ್ರಧಾನಿ ಖಲೀದಾ ಜಿಯಾ ಗೆ 5 ವರ್ಷ ಜೈಲು

ಬಾಂಗ್ಲಾದೇಶದ ನ್ಯಾಯಾಲಯ ಗುರುವಾರ ವಿಪಕ್ಷ ನಾಯಕಿ ಎರಡು ಬಾರಿ ಪ್ರಧಾನಿಯಾಗಿದ್ದ ಖಲೆದಾ ಜಿಯಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಡಾಕಾ: ಬಾಂಗ್ಲಾದೇಶದ ನ್ಯಾಯಾಲಯ ಗುರುವಾರ ವಿಪಕ್ಷ ನಾಯಕಿ ಎರಡು ಬಾರಿ ಪ್ರಧಾನಿಯಾಗಿದ್ದ ಖಲೆದಾ ಜಿಯಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅನಾಥಾಶ್ರಮ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣ ಸಂಬಂಧ ಈ ಶಿಕ್ಷೆ ಪ್ರಕಟವಾಗಿದೆ.
ಬಾಂಗ್ಲಾದೇಶ ನಾಷನಲಿಸ್ಟ್ ಪಕ್ಷದ ನಾಯಕಿ, ಪ್ರತಿಪಕ್ಷ ಮುಖಂಡರಾದ ಜಿಯಾ, ಅನಾಥಾಶ್ರಮಕ್ಕಾಗಿ ರಚನೆಯಾದ ಟ್ರಸ್ಟ್  ನಿಂದ 252,000 ಡಾಲರ್ ಹಣವನ್ನು ಪಡೆದು ದುರುಪಯೋಗಪಡಿಸಿಕೊಂಡಿದ್ದರು.
"ಆಕೆಯ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಮತ್ತು ಅವರ ಸಾಮಾಜಿಕ ಮತ್ತು ದೈಹಿಕ ಸ್ಥಿತಿಯನ್ನು ಪರಿಗಣಿಸಲು ನ್ಯಾಯಾಲಯವು ಸಮರ್ಥವಾಗಿದೆ. ದಂಡ ಸಂಹಿತೆಯ ವಿಭಾಗಗಳಾದ 409 ಮತ್ತು 109ರ ಅನುಸಾರ ಜಿಯಾ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ " ನ್ಯಾಯಾಧೀಶರಾದ ಮೊಹಮ್ಮದ್  ಅಖ್ತರುಝಾಮನ್ ಹೇಳಿದ್ದಾರೆ.
ಜಿಯಾ ಅವರ ಪುತ್ರ ತರೀಕ್ ರೆಹಮಾನ್, ಈ ಪ್ರಕರಣದಲ್ಲಿ ಸಹ ಆರೋಪಿಯಾಗಿದ್ದು, ಅವರ ನಾಲ್ಕು ಸಹಾಯಕರು 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೈಸೂರು ಅರಮನೆ ಬಳಿ ಸಿಲಿಂಡರ್‌ ಸ್ಪೋಟ: ಓರ್ವ ಸಾವು, ಹಲವರಿಗೆ ಗಂಭೀರ ಗಾಯ

ಭಾರತ- ಅಮೆರಿಕ ನಡುವಿನ ಸಂಬಂಧ ಹಳ್ಳಹಿಡಿಸಲು ಯತ್ನದ ಆರೋಪ: ಚೀನಾ ಹೇಳಿದ್ದೇನು?

ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ: ವರದಿ

'ನಮ್ಮ ಬಯಕೆ ಒಂದೇ.. ಅವನು ನಾಶವಾಗಲಿ': ಉಕ್ರೇನ್ ಅಧ್ಯಕ್ಷರ ಕ್ರಿಸ್ ಮಸ್ ಭಾಷಣದಲ್ಲಿ ಪುಟಿನ್ ಸಾವಿನ ಮಾತು! Video

40 ಲಕ್ಷ ರೂ ವೆಚ್ಚದ ಅದ್ಧೂರಿ ಮದುವೆ.. ಹನಿಮೂನ್ ಅರ್ಧಕ್ಕೇ ಮೊಟಕು, ನವವಿವಾಹಿತೆ ಆತ್ಮಹತ್ಯೆ! ಆಗಿದ್ದೇನು?

SCROLL FOR NEXT