ಅಬ್ದುಲ್ಲಾ ಯಮೀನ್ 
ವಿದೇಶ

ಮಿತ್ರರಾಷ್ಟ್ರಗಳಿಗೆ ರಾಯಭಾರಿಗಳನ್ನು ಕಳಿಸಿದ ಮಾಲ್ಡೀವ್ಸ್, ಭಾರತವನ್ನು ದೂರವಿಟ್ಟ ಅಧ್ಯಕ್ಷ ಅಬ್ದುಲ್ಲಾ ಯಮೀನ್

ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಬುಧವಾರ ಮಿತ್ರರಾಷ್ಟ್ರಗಳದ ಚೀನಾ, ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾಗೆ ತನ್ನ ವಿಶೇಷ ಪ್ರತಿನಿಧಿಗಳನ್ನು ಕಲಿಸಿದ್ದಾರೆ.

ಮಾಲೆ (ಮಾಲ್ಡೀವ್ಸ್): ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಬುಧವಾರ ಮಿತ್ರರಾಷ್ಟ್ರಗಳದ ಚೀನಾ, ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾಗೆ ತನ್ನ ವಿಶೇಷ ಪ್ರತಿನಿಧಿಗಳನ್ನು ಕಲಿಸಿದ್ದಾರೆ.
ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಬ್ದುಲ್ ಗಯೂಮ್ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿಯ ಸದಸ್ಯರು ಮಾಲ್ಡೀವ್ಸ್ ನ ಸ್ನೇಹಪರ ರಾಷ್ಟ್ರದ ಪ್ರಮುಖರನ್ನು ಭೇಟಿಯಾಗಿ ಮಾಲ್ಡೀವ್ಸ್ ನ ಪ್ರಸಕ್ತ ಪರಿಸ್ಥಿತಿಯ ಕುರಿತು ವಿವರಿಸುತ್ತಾರೆ. ಅಧ್ಯಕ್ಷರ ಕಛೇರಿಯ ಹೇಳಿಕೆ ತಿಳಿಸಿದೆ.
ಮಾಲ್ಡೀವ್ಸ್ ಆರ್ಥಿಕ ಅಭಿವೃದ್ಧಿ ಸಚಿವ, ಮೊಹಮದ್ ಸಯೀದ್ ಚೀನಾಗೆ ತೆರಳಿದರೆ, ವಿದೇಶಾಂಗ ಸಚಿವ, ಡಾ ಮೊಹಮದ್ ಅಸಿಮ್ ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದಾರೆ. ಮೀನುಗಾರಿಕೆ ಮತ್ತು ಕೃಷಿ ಸಚಿವ ಮೊಹಮದ್ ಶೈನ್ ಗುರುವಾರದಂದು ಸೌದಿ ಅರೇಬಿಯಾಗೆ ತೆರಳುವವರಿದ್ದಾರೆ.
ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮಾಲ್ಡೀವಿಯನ್ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ, ಮಾಲ್ಡೀವ್ಸ್  ನಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ.
 ಭಾರತವನ್ನು ಹೊರಗಿಟ್ಟು ದ್ವೀಪರಾಷ್ಟ್ರ ರಾಯಭಾರಿಗಳನ್ನು ಕಳಿಸುವ ನಿರ್ಧಾರಕ್ಕೆ ಬಂದಿದೆ. ಇದು ಭಾರತಕ್ಕೂ ಸಮಸ್ಯೆಯಾಗಲಿದೆ ಎಂದು ವಿದೇಶಂಗ ಇಲಾಖೆ ಅಭಿಪ್ರಾಯಪಟ್ಟಿದೆ. . . ಇದಕ್ಕೂ ಮುನ್ನ ಮಾಲ್ಡೀವ್ಸ್ ನಲ್ಲಿ ಭಾರತ ಮಿಲಿಟರಶಸ್ತಕ್ಷೇಪ ನಡೆಸುವುದನ್ನು ಚೀನಾ ವಿರೋಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

AI, ಕೃಷಿ, ಸೈಬರ್ ಭದ್ರತೆ, UPI ಸೇರಿದಂತೆ ಸರಣಿ ಒಪ್ಪಂದಗಳಿಗೆ ಭಾರತ ಮತ್ತು ಇಸ್ರೇಲ್ ಸಹಿ

ಹೆಲಿಪ್ಯಾಡ್, ಸ್ವಿಮ್ಮಿಂಗ್ ಪೂಲ್, ಜಿಮ್: ಅನಿಲ್ ಅಂಬಾನಿಯ 3,716 ಕೋಟಿ ರೂ. ಬೆಲೆಬಾಳುವ 17 ಅಂತಸ್ತಿನ ಕಟ್ಟಡ 'Abode ಇಡಿ ವಶಕ್ಕೆ!

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

SCROLL FOR NEXT