ಪ್ರಧಾನಿ ಮೋದಿ ಹಾಗೂ ಬುರ್ಜ್ ಖಲೀಫಾ 
ವಿದೇಶ

ಯುಎಇಗೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ: ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದ ಬುರ್ಜ್ ಖಲೀಫಾ!

ಮೂರು ರಾಷ್ಟ್ರಗಳ ಭೇಟಿ ನಿಮಿತ್ತ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದುಬೈ ಆಕರ್ಷಣೀಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ.

ಅಬುಧಾಬಿ: ಮೂರು ರಾಷ್ಟ್ರಗಳ ಭೇಟಿ ನಿಮಿತ್ತ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಯುಎಇಗೆ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ದುಬೈ ಆಕರ್ಷಣೀಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣಕ್ಕೆ ತಿರುಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಅವರ ಸ್ವಾಗತಕ್ಕೆ ಭಾರಿ ಸಿದ್ಧತೆ ನಡೆಯುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ದುಬೈನ ಆಕರ್ಷಣೆಯ ಕೇಂದ್ರ ಬಿಂದು ಬುರ್ಜ್ ಖಲೀಫಾ ತ್ರಿವರ್ಣ ಧ್ವಜ  ಬಣ್ಣಕ್ಕೆ ತಿರುಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸ್ವಾಗತ ಕೋರಲು ಸಿದ್ಧವಾಗಿದೆ. 
ಇನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ತೆರಳಲಿದ್ದು, ಈ ವೇಳೆ ದುಬೈ ದೊರೆಗಳ ಭೇಟಿ ಮಾಡಲಿದ್ದಾರೆ. ಬಳಿಕ ದುಬೈ ಅಧಿಕಾರಿಗಳನ್ನು ಭೇಟಿ ಮಾಡಲಿರುವ ಅವರು ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ.  ಅಂತೆಯೇ ದುಬೈನಲ್ಲಿರುವ ಭಾರತ ಮೂಲದ ನಿವಾಸಿಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿಲಿದ್ದು, ಅವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ದುಬೈನ ಖ್ಯಾತನಾಮ ವಾಣಿಜ್ಯೋಧ್ಯಮಿಗಳೊಂದಿಗೆ ಪ್ರಧಾನಿ ಮೋದಿ ಸಭೆ  ನಡೆಸಲಿದ್ದು, ಭಾರತದಲ್ಲಿ ಹೂಡಿಕೆ ಮಾಡುವ ಸಂಬಂಧ ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 
ಬಳಿಕ ದುಬೈನಲ್ಲಿ ನಿರ್ಮಾಣವಾಗಿರುವ ಭವ್ಯ ಹಿಂದೂ ದೇಗುಲವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದು, ಈ ಉದ್ಘಾಟನಾ ಸಮಾರಂಭ ಭಾರತ ಮತ್ತು ದುಬೈನಲ್ಲಿ ನೇರ ಪ್ರಸಾರವಾಗುತ್ತಿರುವುದು ವಿಶೇಷವಾಗಿದೆ. ಉದ್ಘಾಟನೆ  ಬಳಿಕ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಇದಕ್ಕಾಗಿ ಒಪೆರಾ ಹೌಸ್ ಸಕಲ ರೀತಿಯಲ್ಲೂ ಸಜ್ಜಾಗಿದೆ. 
ಹಾಲಿ ಪ್ರವಾಸ ಯುಎಇಗೆ ಪ್ರಧಾನಿ ಮೋದಿ ಅವರ 2ನೇ ಭೇಟಿಯಾಗಿದ್ದು, ಈ ಹಿಂದೆ 2015ರಲ್ಲಿಯೂ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿನ ಮುಂದೆ 'Tr' ಬಳಸುವ ಅವಕಾಶ!