ವಿದೇಶ

ಪ್ರಧಾನಿ ಮೋದಿಗೆ ಪ್ಯಾಲೆಸ್ತೇನ್‌ ನ ಅತ್ಯುನ್ನತ 'ಸ್ಟೇಟ್ ಗ್ರ್ಯಾಂಡ್ ಕಾಲರ್' ಗೌರವ

Lingaraj Badiger
ರಮಲ್ಲಾಹ್: ಪ್ಯಾಲೆಸ್ತೇನ್‌ ಅಧ್ಯಕ್ಷ ಮಹಮೌದ್ ಅಬ್ಬಾಸ್ ಅವರು ಭಾರತ ಮತ್ತು ಪ್ಯಾಲೆಸ್ತೇನ್‌ ನಡುವಿನ ಸಂಬಂಧಗಳನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಪ್ರಮುಖ ಕೊಡುಗೆಯನ್ನು ಗುರುತಿಸಿ ಅವರಿಗೆ 'ಗ್ರ್ಯಾಂಡ್ ಕಾಲರ್ ಆಫ್ ದಿ ಸ್ಟೇಟ್ ಆಫ್ ಪ್ಯಾಲೆಸ್ತೇನ್‌' ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇಂದು ಉಭಯ ನಾಯಕರ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ನಂತರ ಮಹಮೌದ್ ಅಬ್ಬಾಸ್ ಅವರು ಪ್ಯಾಲೆಸ್ತೇನ್ ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಮೋದಿ ಅವರಿಗೆ ಅತ್ಯುನ್ನತ ಗೌರವ ನೀಡಿದರು.
ಗ್ರ್ಯಾಂಡ್ ಕಾಲರ್ ಪ್ಯಾಲೆಸ್ತೇನ್ ವಿದೇಶಿ ಗಣ್ಯರಿಗೆ ಮತ್ತು ರಾಜರಿಗೆ ನೀಡುವ ಅತ್ಯುನ್ನತ ಗೌರವವಾಗಿದೆ. ಈ ಹಿಂದೆ ಸೌದಿ ಅರಬಿಯಾದ ಕಿಂಗ್ ಸಲ್ಮಾನ್, ಬಹರೇನ್ ರಾಜ ಹಮದ್ ಗೆ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರಿಗೆ ಈ ಗೌರವ ಲಭಿಸಿದೆ.
ಇದಕ್ಕು ಮುನ್ನ ಪ್ರಧಾನಿ ಮೋದಿ ಅವರು ಪ್ಯಾಲೆಸ್ತೇನ್ ಮಾಜಿ ಅಧ್ಯಕ್ಷ ಯಾಸರ್ ಅರಾಫತ್ ಅವರ ಸಮಾಧಿ ಸ್ಥಳಕ್ಕೆ ತೆರಳಿ ಅವರಿಗೆ ಗೌರವ ಸಲ್ಲಿಸಿ, ಬಳಿಕ ಅರಾಫತ್ ಮ್ಯೂಸಿಯಂಗೆ ಭೇಟಿ ನೀಡಿದರು.
SCROLL FOR NEXT