ವಿದೇಶ

ಉಗ್ರ ಸಂಘಟನೆ ಜೆಯುಡಿ ವಿರುದ್ಧ ಕ್ರಮ ಕೈಗೊಳ್ಳಲು ಪಾಕ್ ಪ್ರಧಾನಿ ಹಿಂದೇಟು: ವರದಿ

Nagaraja AB

ಇಸ್ಲಾಮಾಬಾದ್ : ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್  ನೇತೃತ್ವದ ಜಮಾತ್ -ಉದ್- ದವಾ ಮತ್ತು ಪಾಲ್ಹಾ- ಇ- ಇನ್ಸಾನಿಯತ್ ಪೌಂಢೇಶನ್ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರದಿಂದ  ಪಾಕಿಸ್ತಾನ ಪ್ರಧಾನಮಂತ್ರಿ ಶಾಹಿದ್ ಖಾಕ್ವನ್ ಅಬ್ಬಾಸಿ ಹಿಂದೆ ಸರಿಯಲು ತೀರ್ಮಾನಿಸಿದ್ದಾರೆ.

ರಾಜಕೀಯ ಬಿಕ್ಕಟ್ಟು ಸೃಷ್ಠಿಸಬಹುದೆಂಬ ಭೀತಿಯಿಂದ ಈ ರೀತಿಯ ತೀರ್ಮಾನ ಕೈಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಉಗ್ರ ಚಟುವಟಿಕೆಗಳಿಗೆ ಪಾಕಿಸ್ತಾನ ನೆಲೆಯಾಗಿದೆ ಎಂದು ಆರೋಪಿಸಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ನಷ್ಟು ಭದ್ರತಾ ನೆರವನ್ನು ಸ್ಥಗಿತಗೊಳಿಸಿತ್ತಲ್ಲದೇ, ಉಗ್ರ ಸಂಘಟನೆಗಳನ್ನು ನಿರ್ಬಂಧಿಸಬೇಕೆಂದು  ಒತ್ತಡ ಹಾಕಿತ್ತು.


ಅಮೆರಿಕಾ ಒತ್ತಡದಿಂದ ಉಗ್ರ ಸಂಘಟನೆ ನಿರ್ಬಂಧಿಸಿದ್ದರೆ ನವೆಂಬರ್ ತಿಂಗಳಲ್ಲಿ ನಡೆದಿದ್ದ ರಾಜಕೀಯ ರಾಜಕೀಯ ಅರಾಜಕತೆ ಮತ್ತೆ ಸೃಷ್ಟಿಯಾಗಬಹುದೆಂಬ
 ಕಾರಣದಿಂದ ಈ ನಿರ್ಧಾರದಿಂದ ಹಿಂದೆ ಸರಿದಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಇದರ ಹೊರತಾಗಿಯೂ ಜೆಯುಡಿ ಹಾಗೂ ಎಫ್ ಐಎಫ್ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಸಂಬಂಧ ಆರ್ಥಿಕ ಮತ್ತು ಹಣಕಾಸು ವ್ಯವಹಾರ ಸಲಹೆಗಾರ ಇಸ್ಮಾಯಿಲ್ ಹಾಗೂ ಅಟಾರ್ನಿ ಜನರಲ್ ಇಸ್ಥಾರ್ ಹುಸಫ್ ಅವರನ್ನೊಳಗೊಂಡ ಮೂರು ಸದಸ್ಯರ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂಬ ಮಾಹಿತಿಯೂ ತಿಳಿದುಬಂದಿದೆ.

SCROLL FOR NEXT