ಪುರುಷರ ಅನುಮತಿ ಇಲ್ಲದೇ ಸ್ವಂತ ಉದ್ಯಮ ಸ್ಥಾಪಿಸಲಿರುವ ಸೌದಿ ಮಹಿಳೆಯರು!
ಮಹಿಳೆಯರ ವಿಷಯದಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೇಬಿಯಾದಲ್ಲಿ ಈಗ ಮಹಿಳೆಯರು ಪುರುಷರ ಅನುಮತಿ ಇಲ್ಲದೆಯೇ ಮಹಿಳೆಯರು ಉದ್ಯಮ ಸ್ಥಾಪಿಸಲು ಅನುಮತಿ ದೊರೆತಿದೆ.
ಸೌದಿ ಅರೆಬಿಯ: ಮಹಿಳೆಯರ ವಿಷಯದಲ್ಲಿ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಸೌದಿ ಅರೆಬಿಯದಲ್ಲಿ ಈಗ ಮಹಿಳೆಯರು ಪುರುಷರ ಅನುಮತಿ ಇಲ್ಲದೆಯೇ ಮಹಿಳೆಯರು ಉದ್ಯಮ ಸ್ಥಾಪಿಸಲು ಅನುಮತಿ ದೊರೆತಿದೆ.
ಹೆಚ್ಚು ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಖಾಸಗಿ ವಲಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸೌದಿ ಅರೇಬಿಯಾ ಸರ್ಕಾರ ಮಹಿಳೆಯರಿಗೆ ಈ ಸೌಲಭ್ಯ ಕಲ್ಪಿಸಿದ್ದು, ದಶಕಗಳ ಕಾಲ ಇದ್ದ ಪುರುಷ ಪ್ರಧಾನ ಕಟ್ಟುಪಾಡನ್ನು ಮೀರಲು ಮಹಿಳೆಯರಿಗೆ ಅನುಮತಿ ದೊರೆತಂತಾಗಿದೆ.
ಮಹಿಳೆಯರು ಪತಿ/ತಂದೆಯರ ಅನುಮತಿ ಇಲ್ಲದೇ ತಮ್ಮದೇ ಆದ ಸ್ವಂತ ಉದ್ಯಮವನ್ನು ಸ್ಥಾಪಿಸಬಹುದು ಹಾಗೂ ಸರ್ಕಾರದ ಇ-ಸೇವೆಗಳನ್ನು ಬಳಕೆ ಮಾಡಿಕೊಳ್ಳಬಹುದು ಎಂದು ಅಲ್ಲಿನ ವಾಣಿಜ್ಯ ಹಾಗೂ ಹೂಡಿಕೆ ಸಚಿವಾಲಯದ ವೆಬ್ ಸೈಟ್ ತಿಳಿಸಿದೆ.
ಈ ಹಿಂದಿನ ಕಾನೂನಿನ ಪ್ರಕಾರ ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಮಾಡುವುದಕ್ಕೂ ಸಹ ಮಹಿಳೆಯರು ತಂದೆ, ಪತಿ, ಅಥವಾ ಸಹೋದರರಿಂದ ಅನುಮತಿ ಪತ್ರ ಪಡೆಯಬೇಕಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.