ವಿದೇಶ

ಭಯೋತ್ಪಾದನೆಗೆ ಹಣಕಾಸು ಪೂರೈಕೆ ದೇಶಗಳ ಪಟ್ಟಿಗೆ ಪಾಕ್ ಸೇರ್ಪಡೆ

Vishwanath S
ಇಸ್ಲಾಮಾಬಾದ್: ಭಯೋತ್ಪಾದನೆಗೆ ಹಣಕಾಸು ಪೂರೈಕೆ ಮಾಡುತ್ತಿದೆ ಎಂದು ಜಾಗತಿಕ ಹಣಕಾಸು ನಿಗಾ ಸಂಸ್ಥೆ ಪಾಕಿಸ್ತಾನವನ್ನು ಭಯೋತ್ಪಾದನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. 
ಇದು ಅಮೆರಿಕದೊಂದಿಗಿನ ಸಂಬಂಧ ಹಾಗೂ ಪಾಕ್ ಆರ್ಥಿಕತೆಗೂ ಧಕ್ಕೆಯುಂಟಾಗಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
ಪಾಕಿಸ್ತಾನ ಭಯೋತ್ಪಾದನೆ ಪೋಷಣೆಯ ವಿರುದ್ಧ ಸಮರ ಸಾರಿರುವ ಅಮೆರಿಕ ಈ ನಿರ್ಧಾರಕ್ಕೆ ಬಂದಿದ್ದು, ಇದರಿಂದಾಗಿ ಅಫ್ಘಾನಿಸ್ತಾನ ಹಾಗೂ ನಮ್ಮ ದೇಶಕ್ಕೆ ಬರುವ ಉಗ್ರ ದಾಳಿ ಕಡಿತಗೊಳ್ಳಬಹುದು ಎಂದು ಹೇಳಲಾಗಿದೆ. 
ಭಯೋತ್ಪಾದನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದ ರಾಷ್ಟ್ರಗಳ ಪಟ್ಟಿ ಎಂದೇ ಪರಿಗಣಿಸಲ್ಪಟ್ಟಿರುವ ಬೂದುಬಣ್ಣದ ಪಟ್ಟಿಯಲ್ಲಿ ಪಾಕಿಸ್ತಾನವನ್ನು ಸೇರಿಸಲು ಅಮೆರಿಕ ಕಳೆದ ಒಂದು ವಾರದಿಂದಲೇ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ರಾಷ್ಟ್ರಗಳೊಂದಿಗೆ ಸಾಕಷ್ಟು ಲಾಬಿ ನಡೆಸಿತ್ತು. 
ಪಾಕಿಸ್ತಾನವನ್ನು ಈ ಪಟ್ಟಿಗೆ ಸೇರಿಸದಂತೆ ಚೀನಾ ಮತ್ತು ಟರ್ಕಿ ಮತ್ತು ಗಲ್ಫ್ ಸಹಕಾರ ಮಂಡಳಿಗಳು ಆಗ್ರಹಿಸಿದ್ದವು. ಆದರೆ ಗುರುವಾರ ರಾತ್ರಿ ವೇಳೆ ಚೀನಾ ಮತ್ತು ಜಿಸಿಸಿ ತಮ್ಮ ಆಗ್ರಹವನ್ನು ಹಿಂಪಡೆದಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 
SCROLL FOR NEXT