ವಿದೇಶ

ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ಥಳವಾಗುವುದನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ: ಸಿಐಎ

Lingaraj Badiger
ವಾಷಿಂಗ್ಟನ್: ಉಗ್ರರಿಗೆ ಪಾಕಿಸ್ತಾನ ಸುರಕ್ಷಿತ ಸ್ಥಳವಾಗಿ ಮುಂದುವರೆಯುವುದನ್ನು ಅಮೆರಿಕ ಒಪ್ಪಿಕೊಳ್ಳುವುದಿಲ್ಲ ಎಂದು ಕೇಂದ್ರೀಯ ಗುಪ್ತಚರ ಸಂಸ್ಥೆ(ಸಿಐಎ)ಯ ಮುಖ್ಯಸ್ಥ ಮೈಕ್ ಪೊಂಪಿಯೊ ಅವರು ಹೇಳಿದ್ದಾರೆ.
ಅಮೆರಿಕಕ್ಕೆ ಬೆದರಿಕೆ ಹಾಕುವ ಭಯೋತ್ಪಾದಕರಿಗೆ ಸುರಕ್ಷಿತ ತಾಣವಾಗುವುದನ್ನು ತಡೆಯಬೇಕು ಎಂದು ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೂಚಿಸಿದ್ದಾರೆ ಎಂದು ಸಿಐಎ ನಿರ್ದೇಶಕ ಮೈಕ್ ಪೊಂಪಿಯೊ ಅವರು ತಿಳಿಸಿದ್ದಾರೆ.
ಅಮೆರಿಕ್ಕೆ ಅಪಾಯಕಾರಿಯಾಗಿರುವ ಉಗ್ರರಿಗೆ ಪಾಕಿಸ್ತಾನ ತನ್ನ ನೆಲದಲ್ಲಿ ರಕ್ಷಣೆ ಒದಗಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ ಎಂದು ಪೊಂಪಿಯೊ ಅವರು ಹೇಳಿರುವುದಾಗಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಅಮೆರಿಕಕ್ಕೆ ನೀಡಲಾಗುತ್ತಿರುವ 2 ಬಿಲಿಯನ್ ಡಾಲರ್ ರಕ್ಷಣಾ ನೆರವನ್ನು ಸ್ಥಗಿತಗೊಳಿಸುತ್ತಿರುವ ಬಗ್ಗೆ ಸಿಐಎ ನಿರ್ದೇಶಕರು ಈ ರೀತಿ ಪ್ರತಿಕ್ರಿಯೆಸಿದ್ದಾರೆ.
ಪಾಕ್ ನೆಲದಲ್ಲಿ ಕಾರ್ಯಾಚರಿಸುತ್ತಿರುವ ತಾಲಿಬಾನ್‌ ಹಾಗೂ ಹಕ್ಕಾನಿ ಉಗ್ರ ಜಾಲವನ್ನು ಬುಡಸಹಿತ ಕಿತ್ತು ಹಾಕುವಲ್ಲಿ ವಿಫಲವಾಗಿದ್ದರಿಂದ ಅಮೆರಿಕ ಪಾಕಿಸ್ತಾನಕ್ಕೆ ತಾನು ನೀಡಬೇಕಿದ್ದ  2 ಶತಕೋಟಿ ಡಾಲರ್‌ ಗಳ ಭದ್ರತಾ ನೆರವನ್ನು ಅಮಾನತುಗೊಳಿಸಿದೆ.
SCROLL FOR NEXT