ವಿಯೆನ್ನಾದಲ್ಲಿ ಸೂಕ್ಷ್ಮ ದಾಖಲೆಗಳೊಂದಿಗೆ ಪಾಕ್ ರಾಯಭಾರಿ ಕಚೇರಿಯ ಅಧಿಕಾರಿ ನಾಪತ್ತೆ
ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಕೆಲ ಸೂಕ್ಷ್ಮ ದಾಖಲೆಗಳೊಂದಿಗೆ ನಾಪತ್ತೆಯಾಗಿದ್ದಾರೆ.
ಇಸ್ಲಾಮಾಬಾದ್: ಆಸ್ಟ್ರಿಯಾದ ವಿಯೆನ್ನಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಸಿಬ್ಬಂದಿಯೊಬ್ಬರು ಕೆಲ ಸೂಕ್ಷ್ಮ ದಾಖಲೆಗಳೊಂದಿಗೆ ನಾಪತ್ತೆಯಾಗಿದ್ದಾರೆ.
ಪಾಕಿಸ್ತಾನ ಸೇನೆಯ ಅಧಿಕಾರಿ, ಸಾರಾ-ಇ-ಖಾರ್ಬೋಝಾ ನಿವಾಸಿಯೊಬ್ಬರನ್ನು ಆಸ್ಟ್ರಿಯಾದಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕ್ಲರ್ಕ್ ಆಗಿ ನೇಮಕ ಮಾಡಲಾಗಿತ್ತು. ಅಲ್ಲದೆ ಆತನಿಗೆ ಪಾಕಿಸ್ತಾನ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ ಒಂದು ಅತಿ ಸೂಕ್ಷ್ಮ ಕೆಲಸ ನೀಡಲಾಗಿತ್ತು ಎಂದು ಡಾನ್ ವರದಿ ಮಾಡಿದೆ.
ಪಾಕ್ ಸೇನೆಯ ಅಧಿಕಾರಿಗೆ ರಾಷ್ಟ್ರೀಯ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ವಿಷಯಗಳ ಉಸ್ತುವಾರಿ ನೀಡಲಾಗಿತ್ತು. ಅದು ದೇಶದ ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಮಹತ್ವದ ಹುದ್ದೆ ಎಂದು ವರದಿ ವಿವರಿಸಿದೆ.
ಈ ಸಂಬಂಧ ಪಾಕಿಸ್ತಾನ ರಕ್ಷಣಾ ಸಚಿವಾಲಯ ಪಿಪಿಸಿ ಸೆಕ್ಷೆನ್ 109 ಮತ್ತು 409ರಡಿ ಪ್ರಕರಣ ದಾಖಲಿಸಿದೆ.
ಈ ಮಧ್ಯೆ, ತಮ್ಮ ಪತಿ ಪಾಕಿಸ್ತಾನ ರಾಯಭಾರಿ ಕಚೇರಿಯಿಂದ ಯಾವುದೇ ದಾಖಲೆ ತೆಗೆದುಕೊಂಡು ಹೋಗಿಲ್ಲ. ಆದರೆ ಐದು ವರ್ಷಗಳ ನಂತರ ಅವರು ವಾಪಸ್ ಬರಲಿದ್ದಾರೆ ಎಂದು ನಾಪತ್ತೆಯಾಗಿರುವ ಅಧಿಕಾರಿಯ ಪತ್ನಿ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.