ಯುನೆಸ್ಕೋ ಪಟ್ಟಿಗೆ ಚೀನಾದ ಮೌಂಟ್ ಫನ್ಜಿಂಗ್ಶಾನ್ ಸೇರ್ಪಡೆ
ಚೀನಾದ ನೈಋತ್ಯ ಪ್ರಾಂತ್ಯದಲ್ಲಿರುವ ಮೌಂಟ್ ಫನ್ಜಿಂಗ್ಯಾನ್ ನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ.
ಬೀಜಿಂಗ್: ಚೀನಾದ ನೈಋತ್ಯ ಪ್ರಾಂತ್ಯದಲ್ಲಿರುವ ಮೌಂಟ್ ಫನ್ಜಿಂಗ್ಯಾನ್ ನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ.
ಬಹ್ರೇನ್ ನಲ್ಲಿ ನಡೆದ 42 ನೇ ವಿಶ್ವ ಪಾರಂಪರಿಕ ಸಮಿತಿ ಸಭೆಯಲ್ಲಿ ಮೌಂಟ್ ಫನ್ಜಿಂಗ್ಯಾನ್ ನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ನಿರ್ಧರಿಸಲಾಗಿದೆ. ಉನ್ನತ ಗುಣಮಟ್ಟದ ಕಾಡುಗಳ ವೈವಿಧ್ಯತೆ, ಪರ್ವತ ದೃಶ್ಯಾವಳಿ, ಜೌಗು ಪ್ರದೇಶಗಳು, ಜಲಪಾತಗಳು, 450 ಕಶೇರುಕ ಜೀವಿಗಳನ್ನು ಹೊಂದಿರುವ ಮೌಂಟ್ ಫನ್ಜಿಂಗ್ಯಾನ್ ನ ಸೌಂದರ್ಯವನ್ನು ಗುರುತಿಸಿ , ಯುನೆಸ್ಕೋ ಪಟ್ಟಿಗೆ ಸೇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2018 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರಲು ಒಟ್ಟು 5 ನೈಸರ್ಗಿಕ ತಾಣಗಳನ್ನು ನಾಮನಿರ್ದೇಶನ ಮಾಡಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.