ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರದಲ್ಲಿ ತೊಡಗಿಕೊಂಡ ಖ್ಯಾತ ಮಾಡೆಲ್ ಬಂಧನ, 1 ವರ್ಷ ಶಿಕ್ಷೆ ಸಾಧ್ಯತೆ!
ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿದ ಆರೋಪದ ಮೇಲೆ ಖ್ಯಾತ ಮಾಡೆಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ...
ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿದ ಆರೋಪದ ಮೇಲೆ ಖ್ಯಾತ ಮಾಡೆಲ್ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
19 ವರ್ಷದ ಐರಿಶ್ ಮಾಡೆಲ್ ಜೆಸ್ಸಿ ವಾರ್ಡ್ ಬಂಧನಕ್ಕೊಳಗಾಗಿರುವ ಮಾಡೆಲ್. ಥಾಯ್ಲೆಂಡ್ ನಲ್ಲಿ ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡುವುದು ಅಪರಾಧವಾಗಿದ್ದು ಈ ಹಿನ್ನೆಲೆಯಲ್ಲಿ ಮಾಡೆಲ್ ಗೆ ಒಂದು ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ.
ಜೆಸ್ಸಿ ಸೇರಿದಂತೆ ಇತರ 15 ಮಾಡೆಲ್ ಗಳಿಗೂ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ. ತಾನು ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡಿರುವುದಾಗಿ ನಟಿ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗರಿಷ್ಠ ಒಂದು ವರ್ಷ ಜೈಲು ಶಿಕ್ಷೆಗೆ ಮಾಡೆಲ್ ಗುರುಯಾಗುವ ಸಾಧ್ಯತೆ ಇದೆ.
ತನ್ನ ಕೃತ್ಯಕ್ಕೆ ಜೆಸ್ಸಿ ಕ್ಷಮೆಯಾಚಿಸಿದ್ದು ಗ್ಯಾಂಬ್ಲಿಂಗ್ ವೆಬ್ ಸೈಟ್ ಪ್ರಚಾರ ಮಾಡುವುದು ಅಕ್ರಮವೆಂದು ನಾನು ತಿಳಿದಿರಲ್ಲಿಲ್ಲ. ದಯವಿಟ್ಟು ಯಾರು ಈ ಸೈಟ್ ಗಳೊಂದಿಗೆ ತೊಡಗಿಸಿಕೊಳ್ಳಬೇಡಿ ಎಂದು ಜೆಸ್ಸಿ ಹೇಳಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.