ಇಂದೋನೇಷಿಯಾ: ಚಂಡಮಾರುತಕ್ಕೆ ಸಿಕ್ಕ ಪ್ರಯಾಣಿಕರ ಹಡಗು ಮುಳುಗಡೆ, 31 ಸಾವು 
ವಿದೇಶ

ಇಂಡೋನೇಷಿಯಾ: ಚಂಡಮಾರುತಕ್ಕೆ ಸಿಕ್ಕ ಪ್ರಯಾಣಿಕರ ಹಡಗು ಮುಳುಗಡೆ, 31 ಸಾವು

ಪ್ರಯಾಣಿಕರ ಹಡಗು ಮುಳುಗಿದ ಪರಿಣಾಮ ೩೧ ಮಂದಿ ದಾರುಣ ಸಾವಿಗೀಡಾದ ಘಟನೆ ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ನಡೆದಿದೆ.

ಜಕಾರ್ತಾ(ಇಂಡೋನೇಷಿಯಾ): ಪ್ರಯಾಣಿಕರ ಹಡಗು ಮುಳುಗಿದ ಪರಿಣಾಮ 31 ಮಂದಿ ದಾರುಣ ಸಾವಿಗೀಡಾದ ಘಟನೆ ಇಂಡೋನೇಷಿಯಾದ ಸುಲಾವೆಸಿ ದ್ವೀಪದಲ್ಲಿ ನಡೆದಿದೆ.

ಚಂಡಮಾರುತದ ಕಾರಣ ಹಡಗು ಮುಳುಗಲು ಪ್ರಾರಂಭಗೊಂಡ ತಕ್ಷಣ ಎಚ್ಚೆತ್ತುಕೊಂಡ ನಾವಿಕ ಸಮಯ ಪ್ರಜ್ಞೆ ಮೆರೆದಿದ್ದಾನೆ. ಆತ ಹಡಗನ್ನು ಹತ್ತಿರದ ದ್ವೀಪದತ್ತ ನಡೆಸಿದ್ದಾನೆ. ಇದರಿಂದ ಪ್ರಯಾಣಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಿದ್ದು ಹಲವು ಪ್ರಯಾಣಿಕರ ಜೀವ ಉಳಿದಿದೆ.

ಮುಳುಗಿದ ಹಡಗಿನಲ್ಲಿ ಸಿಬ್ಬಂದಿಯೂ ಸೇರಿ 164 ಮಂದಿ ಇದ್ದರು.ಎಂದು ರಾಷ್ಟ್ರೀಯ ರಕ್ಷಣಾ ಪಡೆ ಅಧಿಕಾರಿಗಳು ಹೇಳಿದ್ದಾರೆ. ಇದುವರೆಗೆ 130 ಮಂದಿಯನ್ನು ರಕ್ಷಿಸಲಾಗಿದ್ದು ಮೂವರು ನಾಪತ್ತೆಯಾಗಿದ್ದಾರೆ ಎಂದು ಇಂಡೋನೇಷಿಯಾ ಸಾರಿಗೆ ಸಚಿವಾಲಯ ಹೇಳಿದೆ.

ಮುಳುಗಿದ ಹಡಗಿನಲ್ಲಿ ಕೇವಲ ಪ್ರಯಾಣಿಕರಷ್ಟೇ ಅಲ್ಲದೆ 48 ವಾಹನಗಳೂ ಇದ್ದವು ಎನ್ನಲಾಗಿದ್ದು ದುರಂತದಲ್ಲಿ ಅಪಾರ ಪ್ರಮಾಣ ಸಂಪತ್ತು ಸಹ ನಷ್ಟವಾಗಿದೆ.

ಇಂಡೋನೇಷಿಯಾದಲ್ಲಿ ಈ ಒಂದು ತಿಂಗಳಿನಲ್ಲಿ ಸಂಭವಿಸಿದ ಎರಡನೇ ಹಡಗು ದುರಂತ ಇದಾಗಿದೆ. ಕಳೆದ ಎರಡು ವಾರಗಳ ಹಿಂದೆ ಸುಮಾತ್ರ ದ್ವೀಪದ ಬಳಿ ನಡೆದ ಹಡಗು ದುರಂತದಲ್ಲಿ 200ಕ್ಕೆ ಹೆಚ್ಚಿನ ಜನ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್: ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

ರಾಮ ಮಂದಿರ ಟ್ರಸ್ಟ್‌ CEO ಹುದ್ದೆಗೆ ಬರೋಬ್ಬರಿ 5,200 ಅರ್ಜಿ; ಸಂದರ್ಶನಕ್ಕೆ ಕೇವಲ 20 ಅಭ್ಯರ್ಥಿಗಳು ಆಯ್ಕೆ!

17 ದಿನಗಳಿಂದ ಸಂಸತ್ತಿನ ಎರಡೂ ಸದನಗಳು ಸ್ತಬ್ಧ; ನಮ್ಮ ಬೇಡಿಕೆಗಳಿಗೆ ಹೆದರಿ PM ಮೋದಿ, ಅಮಿತ್ ಶಾ ಸದನಕ್ಕೆ ಬರುತ್ತಿಲ್ಲ: ಖರ್ಗೆ

Video: ಬಿಡದಿ ಟೌನ್‌ಶಿಪ್ ಪಿಸುಮಾತು ವಿವಾದ: ಮಧು ಬಂಗಾರಪ್ಪ ಜೊತೆಗಿನ ಮಾತುಕತೆ ಬಗ್ಗೆ ಬಿ.ವೈ. ವಿಜಯೇಂದ್ರ ಸ್ಪಷ್ಟನೆ

'ಬೇಡ ಬ್ರೋ': ಬೆಂಗಳೂರು ಪೊಲೀಸರ ಭರ್ಜರಿ ಬೇಟೆ; 55.8 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, 39 ಡ್ರಗ್ ಪೆಡ್ಲರ್‌ಗಳ ಬಂಧನ!