ಪಾಕಿಸ್ತಾನ: ಬಲೂಚಿಸ್ತಾನ್ ನಲ್ಲಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಆತ್ಮಹತ್ಯಾ ಬಾಂಬರ್ ದಾಳಿಯಿಂದ ಮೃತಪಟ್ಟವರ ಸಂಖ್ಯೆ 130ಕ್ಕೆ ಏರಿಕೆ ಆಗಿದೆ.
ದಾಳಿಯಿಂದಾಗಿ 200 ಜನರು ಗಾಯಗೊಂಡಿದ್ದಾರೆ. ಈ ಪೈಕಿ 20 ಜನರ ಸ್ಥಿತಿ ಗಂಭೀರವಾಗಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನಲ್ ವರದಿ ಮಾಡಿದೆ.
ಬಲೊಚಿಸ್ತಾನದಲ್ಲಿ ಅವಾಮಿ ಪಕ್ಷದ ನಾಯಕ ಸಿರಾಜ್ ರೈಸಾನಿ ಪಾಲ್ಗೊಂಡಿದ್ದ ಚುನಾವಣಾ ಪ್ರಚಾರ ಸಮಾವೇಶವನ್ನು ಗುರಿಯಾಗಿಟ್ಟುಕೊಂಡು ನಡೆದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ ಕನಿಷ್ಠ 128 ಮಂದಿ ಸಾವನ್ನಪ್ಪಿದ್ದು, 200 ಮಂದಿ ಗಾಯಗೊಂಡಿದ್ದಾರೆ.
ಈ ಘಟನೆಯಿಂದಾಗಿ ಬಲೋಚಿಸ್ತಾನ್ ನಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ. ನಗರದ ಹಲವು ಕಡೆಗಳಲ್ಲಿ ವ್ಯಾಪಾರ- ವಾಣಿಜ್ಯ ರದ್ದುಗೊಂಡಿದೆ. ಈ ಪ್ರದೇಶಾದ್ಯಂತ ಹೈ ಆಲರ್ಟ್ ಘೋಷಿಸಲಾಗಿದೆ.