ವಿದೇಶ

ಉಗಾಂಡದೊಂದಿಗೆ ವ್ಯಾಪಾರ ಸಮತೋಲನಕ್ಕಾಗಿ ಅಗತ್ಯ ಕ್ರಮ - ಪ್ರಧಾನಿ ಮೋದಿ

Nagaraja AB

ಕಂಪಾಲಾ: ಉಗಾಂಡಾದೊಂದಿಗೆ ವ್ಯಾಪಾರ ಸಮತೋಲನಗೊಳಿಸುವುದಕ್ಕಾಗಿ ಹೆಚ್ಚುವರಿ ಮೈಲಿಯನ್ನು ಕ್ರಮಿಸಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.

ಭಾರತ -ಉಗಾಂಡ  ವ್ಯಾಪಾರ ಒಕ್ಕೂಟದಲ್ಲಿ ಮಾಧ್ಯಮಗಳು ಮತ್ತು ಇತರ ನಿಯೋಗದೊಂದಿಗೆ ಮಾತನಾಡಿದ ನರೇಂದ್ರಮೋದಿ, ಭಾರತ ಮತ್ತು ಉಗಾಂಡ ನಡುವಿನ ವ್ಯಾಪಾರದಲ್ಲಿ ಅಸಮತೋಲನವಿರುವುದಾಗಿ  ಉಗಾಂಡ ಅಧ್ಯಕ್ಷರು ಹೇಳಿದ್ದಾರೆ. ಅಸಮತೋಲನ ತಪ್ಪಿಸಲು 10 ಕ್ರಮಗಳನ್ನು ಕೈಗೊಳ್ಳಲು ಭಾರತ ಸಿದ್ಧವಿದೆ. ಅದಕ್ಕಾಗಿಯೇ ಇಲ್ಲಿಗೆ ಬಂದಿರುವುದಾಗಿ ಮೋದಿ ತಿಳಿಸಿದರು.
ಉಗಾಂಡಕ್ಕೆ 200 ಮಿಲಿಯನ್ ಡಾಲರ್ ಮೊತ್ತದ ಸಾಲದ ನೆರವು

ಭಾರತ ಮತ್ತು ಉಗಾಂಡ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದು, ಭಾರತ ಉಗಾಂಡಾಕ್ಕೆ  ಸುಮಾರು 200 ಮಿಲಿಯನ್ ಡಾಲರ್ ಮೊತ್ತದ ಸಾಲದ ನೆರವನ್ನು ನೀಡುವುದಾಗಿ ನರೇಂದ್ರಮೋದಿ ಹೇಳಿದರು.
ಉಗಾಂಡದಲ್ಲಿ ತರಬೇತಿ, ಕೌಶಲ್ಯಾಭಿವೃದ್ದಿ, ಮೂಲಸೌಕರ್ಯ ಅಭಿವೃದ್ದಿಗೆ ಭಾರತ ನೆರವು ನೀಡಲಿದೆ. ಉಗಾಂಡದಲ್ಲಿ ಗಾಂಧಿ ಸ್ಮಾರಕ ಕೇಂದ್ರವನ್ನು ಸ್ಥಾಪಿಸಲಾಗುವುದು, ಇಂಧನ ಮೂಲಸೌಕರ್ಯ,  ಕೃಷಿ ಮತ್ತು ಹೈನುಗಾರಿಕೆ ಕ್ಷೇತ್ರದ ಅಭಿವೃದ್ದಿಗೆ  ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಉಭಯ ರಾಷ್ಟ್ರಗಳು  ಪರಿಪೂರ್ಣ ಗೆಲುವು ಪರಿಸ್ಥಿತಿಯಲ್ಲಿವೆ. ಆದರೆ. ಇದರಿಂದ ಗರಿಷ್ಠ ಅನುಕೂಲ ಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಸೂಕ್ತ ಕಾರ್ಯತಂತ್ರ ಅನುಸರಿಸಿದರೆ  ಮುಂದೆ ಬರಬಹುದು ಎಂದರು.
ಭಾರತದ್ದು ನೀತಿ ಆಧಾರಿತ ಆಡಳಿತವಾಗಿದ್ದು, ಅಲ್ಲಿ ತೆರಿಗೆ ಸ್ಥಿರತೆ ಮತ್ತು ಊಹಿಸಬಹುದಾದ ತೆರಿಗೆ ಇದ್ದು, ಯಾರೂ ಬೇಕಾದರೂ ಹೂಡಿಕೆ ಮಾಡಬಹುದು,  ಭಾರತದ ಆರ್ಥಿಕತೆ ವೇಗವಾಗಿ ಬೆಳೆವಣಿಗೆಯಾಗುತ್ತಿದ್ದು, ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ತಿಳಿಸಿದರು.
ಉಗಾಂಡದಲ್ಲಿ ಉತ್ತಮವಾದ ಭೂಮಿ ಇದೆ. ಸಾವಯವ ಕೃಷಿ ಉತ್ಪನ್ನಗಳಿಗಾಗಿ  ಡೊಡ್ಡ ಮಾರುಕಟ್ಟೆಗಳಿವೆ. ಇಲ್ಲಿ ರಾಸಾಯನಿಕ ಮಿಶ್ರಣವಿಲ್ಲದೆ ಉತ್ತಮ ಮಣ್ಣಿದ್ದು, ಭಾರತ ಯುವಜನರೊಂದಿಗೆ ಅನ್ವೇಷಣೆ ಕಡೆಗೆ ಉಗಾಂಡ ಯುವಜನತೆ ತೊಡಗಿಸಿಕೊಳ್ಳುವಂತೆ ಮೋದಿ ಕರೆ ನೀಡಿದರು.
ಮೂರು ಆಫ್ರಿಕಾ ರಾಷ್ಟ್ರಗಳ ಪ್ರವಾಸದಲ್ಲಿರುವ ನರೇಂದ್ರಮೋದಿ ಇಂದಿನಿಂದ ಎರಡು ದಿನ ಜೋಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ರಾಷ್ಟ್ರಗಳ  10 ನೇ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
SCROLL FOR NEXT