ಪಿಟಿಐ ಪಕ್ಷದ ಕಾರ್ಯಕರ್ತರ ಸಂಭ್ರಮಾಚರಣೆ
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಸೋಮವಾರ ನಡೆದಿದ್ದ ಮಹಾಚುನಾವಣೆಯ ಮತದಾನದಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.ಹಲವು ರಾಜಕೀಯ ಪಕ್ಷಗಳು ಚುನಾವಣೆ ಪ್ರಕ್ರಿಯೆ ಸಂಬಂಧ ಎತ್ತಿದ ಆಕ್ಷೇಪಗಳನ್ನು ಅದು ತಿರಸ್ಕರಿಸಿದೆ.
ಚುನಾವಣಾ ಫಲಿತಾಂಶ ಸಂಗ್ರಹವಾಗುತ್ತಿದ್ದು ಮುಂದಿನ ಒಂದು ಗಂಟೆಗಾಳಲ್ಲಿ ಮೊದಲ ಅಧಿಕೃತ ಫಲಿತಾಂಶ ಘೋಷಣೆಯಾಗಲಿದೆ ಎಂದು ಇಸಿಪಿ ಹೇಳಿದೆ.
ಒಟ್ಟು 85,000 ಮತದಾನ ಕೇಂದ್ರಗಳಲ್ಲಿ 25,000 ಕೇಂದ್ರಗಳ ಫಲಿತಾಂಶಗಳನ್ನು ಅಪ್ಲೋಡ್ ಮಾಡಿದ ನಂತರ ಫಲಿತಾಂಶ ರವಾನೆ ಸೇವೆ ಮುಂದುವರಿಯಲು ವಿಫಲವಾಗಿದೆ ಎಂದು ಇಸಿಪಿ ಕಾರ್ಯದರ್ಶಿ ಬಾಬರ್ ಯಾಕೋಬ್ ಹೇಳಿದ್ದಾರೆ.
ಚುನಾವಣೆ ಅಕ್ರಮವರದಿಯನ್ನು ತಿರಸ್ಕರಿಸಿದ ಅವರು "ಇಸಿಪಿ ಫಲಿತಾಂಶಗಳನ್ನು ಪ್ರಕಟಿಸಿದ ನಂತರವಷ್ಟೇ ಇದರ ಕುರಿತಂತೆ ಚರ್ಚೆ ನಡೆಸಬಹುದು" ಎಂದಿದ್ದಾರೆ.
ಇಮ್ರಾನ್ ಖಾನ್-ನೇತೃತ್ವದ ಪಾಕಿಸ್ತಾನ ತೆಹರೀಕ್-ಇ-ಇನ್ಸಾಫ್ ವಿಜಯವು ಚುನಾವಣಾ ಪ್ರಕ್ರಿಯೆಯ ಬಗೆಗೆ ಮೇಲೆ ಗಂಭೀರವಾದ ಪ್ರಶ್ನೆಗಳು ಹುಟ್ಟುವಂತೆ ಮಾಡಿದ್ದವು.
ಪಿಟಿಐ ಗೆಲುವು ಆ ಪಕ್ಷದ ಕಾರ್ಯಕರ್ತರು, ನಾಯಕರಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.111 ಸ್ಥಾನಗಳಲ್ಲಿ ಪಕ್ಷವು ಮುನ್ನಡೆ ಸಾಧಿಸಿರುವುದಾಗಿ ವರದಿಯಾಗಿದೆ. ಭ್ರಷ್ಠಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ನವಾಜ್ ಶರೀಫ್ ಅವರ ಪಾಕಿಸ್ತಾನ ಮುಸ್ಲಿಮ್ ಲೀಗ್ ಎರಡನೇ ಸ್ಥಾನದಲ್ಲಿದೆ. 68 ಕ್ಷೇತ್ರಗಳಲ್ಲಿ ಇದು ಮುನ್ನಡೆ ಸಾಧಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics