ಇಮ್ರಾನ್ ಖಾನ್ 
ವಿದೇಶ

ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವ ಅನಿವಾರ್ಯತೆಯಲ್ಲಿ ಇಮ್ರಾನ್ ಖಾನ್

ಪಾಕಿಸ್ತಾನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ...

ಇಸ್ಲಮಾಬಾದ್: ಪಾಕಿಸ್ತಾನ ಲೋಕಸಭೆ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ನ್ಯಾಶನಲ್ ಅಸೆಂಬ್ಲಿಯಲ್ಲಿ 109 ಸ್ಥಾನಗಳಲ್ಲಿ ಜಯಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಗೊತ್ತೇ ಇದೆ, ಆದರೆ ದೇಶದ ಪ್ರಧಾನಿಯಾಗಲು ಹೊರಟಿರುವ ಇಮ್ರಾನ್ ಖಾನ್ ಅವರ ಭವಿಷ್ಯ ಹೂವಿನ ಹಾಸಿಗೆಯಂತಿಲ್ಲ.

ಪೂರ್ಣ ಪ್ರಮಾಣದ ಸರ್ಕಾರ ರಚಿಸಲು ಬೇಕಾಗುವಷ್ಟು ಸ್ಥಾನ ಇಮ್ರಾನ್ ಅವರ ಟೆಹ್ರೀಕ್ ಇ ಇನ್ಸಾಫ್ ಅವರಿಗೆ ಸಿಕ್ಕಿಲ್ಲ. ಸರ್ಕಾರ ರಚಿಸಬೇಕಾದರೆ ಸ್ವತಂತ್ರ ಅಭ್ಯರ್ಥಿಗಳ ಬೆಂಬಲ ಪಡೆಯಲೇಬೇಕು. ಕಳೆದ ಬುಧವಾರ ಪಾಕಿಸ್ತಾನ ಸಂಸತ್ತಿಗೆ ನಡೆದ ಚುನಾವಣೆ ನಂತರದ ಫಲಿತಾಂಶದಲ್ಲಿ ಪಿಟಿಐಗೆ 109 ಸ್ಥಾನ ಸಿಕ್ಕಿದೆ. ಒಟ್ಟು 269 ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿತ್ತು.
ಇಮ್ರಾನ್ ಖಾನ್ ಅವರ ಸಮೀಪ ಸ್ಪರ್ಧಿ ಶೆಹಬಾಜ್ ಶರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್ಎನ್)63 ಸ್ಥಾನಗಳನ್ನು ಗೆದ್ದುಕೊಂಡಿದೆ. ಮಾಜಿ ಪ್ರಧಾನಿ ಪ್ರಸ್ತುತ ಜೈಲಿನಲ್ಲಿರುವ ನವಾಜ್ ಶರೀಫ್ ನೇತೃತ್ವದ ಪಿಎಂಎಲ್ಎನ್, ಮತದಾನದ ವೇಳೆ ವ್ಯಾಪಕ ಮೋಸ ಮತ್ತು ಅಕ್ರಮ ನಡೆದಿದ್ದು ಈ ಫಲಿತಾಂಶವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ಆದರೆ ತಮ್ಮ ಗೆಲುವನ್ನು ಸಾರಿರುವ ಇಮ್ರಾನ್ ಖಾನ್, ನವಾಜ್ ಶರೀಫ್ ಆರೋಪವನ್ನು ತಳ್ಳಿಹಾಕಿದ್ದಾರೆ. ಪಾಕಿಸ್ತಾನದ ಇತಿಹಾಸದಲ್ಲಿ ಈ ಬಾರಿ ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆದಿದೆ ಎಂದಿದ್ದಾರೆ.

ಇನ್ನು ಮೂರನೇ ಸ್ಥಾನದಲ್ಲಿ ಪಾಕಿಸ್ತಾನ ಪೀಪಲ್ಸ್ ಪಾರ್ಟಿಗೆ ಹೋಗಿದ್ದು 39 ಸ್ಥಾನಗಳನ್ನು ಗೆದ್ದುಕೊಂಡಿದೆ. 20 ಕ್ಷೇತ್ರಗಳ ಮತ ಎಣಿಕೆ ಇನ್ನೂ ಬಾಕಿಯಿದೆ. ಸರ್ಕಾರ ರಚನೆಗೆ ಬೇಕಾದ 137 ಸ್ಥಾನಗಳಲ್ಲಿ 27 ಸ್ಥಾನಗಳು ಇಮ್ರಾನ್ ಖಾನ್ ಗೆ ಕಡಿಮೆಯಾಗಿದೆ. ಮೈತ್ರಿಕೂಟ ರಚಿಸಿಕೊಂಡರೆ ಸರ್ಕಾರ ರಚಿಸಲು ಇಮ್ರಾನ್ ಖಾನ್ ಗೆ ಯಾವುದೇ ಅಡ್ಡಿಯುಂಟಾಗದು.

ಪಾಕಿಸ್ತಾನದ ಅತಿ ದೊಡ್ಡ ಪ್ರಾಂತ್ಯ ಕ್ಷೇತ್ರವಾದ ಪಂಜಾಬ್ ನ್ನು ನವಾಜ್ ಶರೀಫ್ ಪಕ್ಷದಿಂದ ಪಡೆಯುವಲ್ಲಿ ಇಮ್ರಾನ್ ಖಾನ್ ಪಕ್ಷ ಜಯಶಾಲಿಯಾಗಿದೆ. ಪಾಕಿಸ್ತಾನದ 208 ದಶಲಕ್ಷ ಜನರಿಗೆ ಪಂಜಾಬ್ ಪ್ರಾಂತ್ಯ ತವರಾಗಿದ್ದು 1988ರಿಂದ ಇಲ್ಲಿ ಶರೀಫ್ ಆಡಳಿತವಿತ್ತು. ಇಂತಹ ಸಂದರ್ಭದಲ್ಲಿ ಪಿಟಿಐ ಪಕ್ಷ ನ್ಯಾಶನಲ್ ಅಸೆಂಬ್ಲಿಯಲ್ಲಿ 109 ಸ್ಥಾನಗಳನ್ನು, 118 ಸ್ಥಾನಗಳನ್ನು ಪಂಜಾಬ್ ಪ್ರಾಂತ್ಯದಲ್ಲಿ, ಸಿಂಧ್ ಪ್ರಾಂತ್ಯದಲ್ಲಿ 20, ಖೈಬರ್-ಪಕ್ತುನ್ಕಾವದಲ್ಲಿ 66 ಮತ್ತು ಬಲೂಚಿಸ್ತಾನದಲ್ಲಿ 4 ಸ್ಥಾನಗಳನ್ನು ಪಡೆದುಕೊಂಡಿದೆ. ಪಿಎಂಎಲ್ಎಲ್ ನ್ಯಾಷನಲ್ ಅಸೆಂಬ್ಲಿಯಲ್ಲಿ 63, ಪಂಜಾಬ್ ನಲ್ಲಿ 127, ಸಿಂಧ್ ನಲ್ಲಿ ಶೂನ್ಯ, ಕೆಪಿಯಲ್ಲಿ 5 ಸ್ಥಾನಗಳನ್ನು ಮತ್ತು ಬಲೂಚಿಸ್ತಾನದಲ್ಲಿ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

ಇನ್ನು ಪಿಪಿಪಿ ನ್ಯಾಶನಲ್ ಅಸೆಂಬ್ಲಿಯಲ್ಲಿ 42, ಪಂಜಾಬ್ ನಲ್ಲಿ 6, ಸಿಂಧ್ ನಲ್ಲಿ 71, ಕೆಪಿಯಲ್ಲಿ 4 ಮತ್ತು ಬಲೂಚಿಸ್ತಾನದಲ್ಲಿ ಖಾತೆಯನ್ನೇ ತೆರೆದಿಲ್ಲ. ನ್ಯಾಶನಲ್ ಅಸೆಂಬ್ಲಿಯ 20 ಕ್ಷೇತ್ರಗಳು, ಪಂಜಾಬ್ ನ 6, ಸಿಂಧ್ ಪ್ರಾಂತ್ಯದ 11, ಕೆಪಿಯ 2 ಮತ್ತು ಬಲೂಚಿಸ್ತಾನದಲ್ಲಿ 5 ಸ್ಥಾನಗಳ ಫಲಿತಾಂಶವನ್ನು ಚುನಾವಣಾ ಆಯೋಗ ಇನ್ನೂ ಪ್ರಕಟಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ