ವೀಸಾ ನೀಡಲು ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿ : ಭಾರತವನ್ನು ಹೊರಗಿಟ್ಟ ಬ್ರಿಟನ್ ವಿರುದ್ಧ ತೀವ್ರ ಅಸಮಾಧಾನ 
ವಿದೇಶ

ವೀಸಾ ನೀಡಲು ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿ : ಭಾರತವನ್ನು ಹೊರಗಿಟ್ಟ ಬ್ರಿಟನ್ ವಿರುದ್ಧ ತೀವ್ರ ಅಸಮಾಧಾನ

ಬ್ರಿಟನ್ ನ ವಿಶ್ವವಿದ್ಯಾನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಡಿಮೆ ಅಪಾಯಕಾರಿ ದೇಶಗಳ

ಲಂಡನ್: ಬ್ರಿಟನ್ ನ ವಿಶ್ವವಿದ್ಯಾನಿಲಯಗಳಿಗೆ ತೆರಳುವ ವಿದ್ಯಾರ್ಥಿಗಳ ವೀಸಾ ಅರ್ಜಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ಕಡಿಮೆ ಅಪಾಯಕಾರಿ ದೇಶಗಳ ಪಟ್ಟಿಯನ್ನು ತಯಾರಿಸಿದೆ. ಈ ಪಟ್ಟಿಯಲ್ಲಿ ಭಾರತವನ್ನು ಹೊರಗಿಟ್ಟಿರುವುದು ತೀವ್ರ ಅಸಮಾಧಾನಕ್ಕೆ ಗುರಿಯಾಗಿದೆ. 
ವಲಸೆ ನೀತಿಯಲ್ಲಿ ಬ್ರಿಟನ್ ಹಲವು ಬದಲಾವಣೆಗೆಳನ್ನು ಮಾಡಲು ಮುಂದಾಗಿದ್ದು, ಈ ಸಂಬಂಧ ಸಂಸತ್ ನಲ್ಲಿ ಹೊಸ ನೀತಿಯನ್ನು ಮಂಡಿಸಲಾಗಿದೆ. ಸುಮಾರು 25 ರಾಷ್ಟ್ರಗಳಿಂದ ಬ್ರಿಟನ್ ಗೆ ಬರುವ ವಿದ್ಯಾರ್ಥಿಗಳಿಗಾಗಿ ಟೈರ್-4 ವಿಭಾಗದ ವೀಸಾ ನಿಯಮಗಳನ್ನು ಸಡಿಸಿಲುವುದಾಗಿ ಬ್ರಿಟನ್ ನ ಗೃಹ ಇಲಾಖೆ ತಿಳಿಸಿತ್ತು.  ಅಮೆರಿಕ, ಕೆನಡಾ ಹಾಗೂ ನ್ಯೂಜಿಲ್ಯಾಂಡ್ ಸೇರಿದಂತೆ 25 ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ಬ್ರಿಟನ್ ವೀಸಾ ದೊರೆಯಲಿದ್ದು, ಭಾರತವನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ. 
ಬ್ರಿಟನ್ ನ ಈ ನಿರ್ಧಾರದಿಂದ ಭಾರತೀಯ ವಿದ್ಯಾರ್ಥಿಗಳ ವೀಸಾ ಅರ್ಜಿಯನ್ನು ಕಠಿಣವಾಗಿ ಪರಿಶೀಲನೆ ಮಾಡಲಾಗುತ್ತದೆ. ಬ್ರಿಟನ್ ನ ಈ ಕ್ರಮವನ್ನು ಬ್ರಿಟನ್ ನಲ್ಲಿರುವ ಭಾರತೀಯ ಮೂಲದ ಉದ್ಯಮಿ ಹಾಗೂ ಯುಕೆಸಿಐಎಸ್ಎ ಅಧ್ಯಕ್ಷ ಭಾರತಕ್ಕೆ ಮಾಡಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಿರಿಯ ನಟ ಅನಂತ್ ನಾಗ್ ಗೆ ಪ್ರತಿಷ್ಠಿತ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಪ್ರಕಟ! ಪ್ರಧಾನಿ ಮೋದಿ, ಸಿಎಂ ಡಿಕೆಶಿ ಅಭಿನಂದನೆ

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಾರ್ದಿಕ್, ಪಂತ್'ಗೆ ಬಿಗ್ ಶಾಕ್; ವಿರಾಟ್, ರೋಹಿತ್​ ಶರ್ಮಾಗೆ ಚಾನ್ಸ್

‘ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದ್ರೂ ನಂಬದ ಅನಂತ್ ನಾಗ್; ‘ಸುಳ್ಳು ಸುದ್ದಿ’ ಎಂದು ನಕ್ಕಿ ಮಲಗಿದ್ರು’

CBFC ಪುನಾರಚನೆ: ಸುನಿಲ್ ಶೆಟ್ಟಿ, ಪ್ರೀತಿ ಜಿಂಟಾ, ರಿಕಿ ಕೇಜ್ ಸೇರಿದಂತೆ 18 ಸದಸ್ಯರ ಆಯ್ಕೆ!

ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ