ವಿದೇಶ

ಭಾರತೀಯರು ಗ್ರೀನ್ ಕಾರ್ಡ್ ಪಡೆಯಲು 151 ವರ್ಷ ಕಾಯಬೇಕು!

Srinivas Rao BV
ವಾಷಿಂಗ್ ಟನ್: ಉನ್ನತ ಪದವಿಗಳನ್ನು ವ್ಯಾಸಂಗ ಮಾಡಿರುವ ಭಾರತೀಯರು ಅಮೆರಿಕದ ಗ್ರೀನ್ ಕಾರ್ಡ್ ಪಡೆಯಬೇಕೆಂದರೆ ಬರೊಬ್ಬರಿ 151 ವರ್ಷ ಕಾಯಬೇಕು. 
ಹೌದು ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆ(ಯುಎಸ್ ಸಿಐಎಸ್) ಗ್ರೀನ್ ಕಾರ್ಡ್ ಗಾಗಿ ಅರ್ಜಿದಾರ ಸಂಖ್ಯೆಯನ್ನು ಬಹಿರಂಗಗೊಳಿಸಿದ ನಂತರ ವಾಷಿಂಗ್ ಟನ್ ನ ಕ್ಯಾಟೊ ಇನ್ಸ್ಟಿಟ್ಯೂಟ್ ಎಂಬ ಚಿಂತಕರ ಚಾವಡಿ ಈ ಬಗ್ಗೆ ಅಧ್ಯಯನ ನಡೆಸಿದ್ದು, ಭಾರತೀಯರು ಗ್ರೀನ್ ಕಾರ್ಡ್ ಹೊಂದಬೇಕಾದರೆ 150 ವರ್ಷಗಳು ಕಾಯಬೇಕಾಗುತ್ತದೆ ಎಂದಿದೆ. 
2018 ರ ಏ.20 ರ ಪ್ರಕಾರ 632,219 ಭಾರತೀಯರು ಅವರ ಪತ್ನಿ ಹಾಗೂ ಮಕ್ಕಳು ಅಮೆರಿಕಾದಲ್ಲೇ ಶಾಶ್ವತವಾಗಿ ನೆಲೆಸಲು ಗ್ರೀನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. 2017 ರಲ್ಲಿ ವಿತರಣೆ ಮಾಡಲಾಗಿರುವ ಗ್ರೀನ್ ಕಾರ್ಡ್ ನ ಅಂಕಿ-ಅಂಶಗಳ ಬಗ್ಗೆಯೂ ಮಾಹಿತಿ ಪಡೆದು ಅಧ್ಯಯನ ನಡೆಸಿರುವ ವಾಷಿಂಗ್ ಟನ್ ನ ಕ್ಯಾಟೊ ಇನ್ಸ್ಟಿಟ್ಯೂಟ್ ಎಂಬ ಚಿಂತಕರ ಚಾವಡಿ ಭಾರತದಿಂದ ಬರುವ ಅಸಮಾನ್ಯ ವಲಸಿಗರು (ವಿಶೇಷ ಸಾಮರ್ಥ್ಯ ಹೊಂದಿರುವವರನ್ನು ಇಬಿ-1 ವಲಸಿಗರ ಪಟ್ಟಿಗೆ ಸೇರಿಸಲಾಗುತ್ತದೆ) ಗ್ರೀನ್ ಕಾರ್ಡ್ ಪಡೆಯಲು ಕನಿಷ್ಠ 6 ವರ್ಷಗಳು ಕಾಯಬೇಕಾಗುತ್ತದೆ ಎಂದಿದೆ.  ಈ ಶ್ರೇಣಿಯಲ್ಲಿ ಗ್ರೀನ್ ಕಾರ್ಡ್ ಗೆ ಸುಮಾರು 34,824 ಭಾರತೀಯರು ಅರ್ಜಿ ಸಲ್ಲಿಸಿದ್ದು, ಕುಟುಂಬ ಸದಸ್ಯರೂ ಸೇರಿದಂತೆ ಒಟ್ಟಾರೆ 83,578 
ಇಬಿ-3 ಕೆಟಗರಿಯಲ್ಲಿ ಗ್ರೀನ್ ಕಾರ್ಡ್ ಪಡೆಯಲು ಸುಮಾರು 1,15,273 ಜನರು ಅರ್ಜಿ ಸಲ್ಲಿಸಿದ್ದು,  17 ವರ್ಷ ಕಾಯಬೇಕಾಗುತ್ತದೆ. ಆದರೆ ಉನ್ನತ ಪದವಿ ಪಡೆದಿರುವ ಇಬಿ-2 ವರ್ಗದ ವ್ಯಾಪ್ತಿಗೆ ಬರುವವರು ಗ್ರೀನ್ ಕಾರ್ಡ್ ಪಡೆಯಲು 151 ವರ್ಷ ಕಾಯಬೇಕು ಎನ್ನುತ್ತಿದೆ ಕ್ಯಾಟೊ ಇನ್ಸ್ಟಿಟ್ಯೂಟ್. 
ಯುಎಸ್ ಸಿಐಎಸ್ ಪ್ರಕಾರ ಇಬಿ-2 ಕೆಟಗರಿಯಲ್ಲಿ ಭಾರತದ 2,16,684 ಜನರು ಪ್ರಾಥಮಿಕ ಅರ್ಜಿದಾರರಾಗಿದ್ದು, ಅವರ ಕುಟುಂಬ ಸದಸ್ಯರೂ ಸೇರಿದಂತೆ ಒಟ್ಟಾರೆ 4,33,368 ಭಾರತೀಯರಿದ್ದಾರೆ. 
SCROLL FOR NEXT