ಪಾಕಿಸ್ತಾನದ ಇಂಜಿನಿಯರ್ ಗಳಿಗೆ ಲಷ್ಕರ್ ಉಗ್ರ ಸಂಘಟನೆಯಿಂದ ಮ್ಯಾನೇಜ್ಮೆಂಟ್ ತರಬೇತಿ!
ಲಾಹೋರ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತಯ್ಬಾ ಇಂಜಿನಿಯರ್ ಗಳಿಗೆ ಮ್ಯಾನೇಜ್ಮೆಂಟ್ ತರಬೇತಿ ನೀಡುತ್ತಿದೆ.
ಲಾಹೋರ್ ನಲ್ಲಿರುವ ಕೇಂದ್ರ ಕಚೇರಿಯಲ್ಲಿ ಇಂಜಿನಿಯರ್ ಗಳಿಗೆ ಮ್ಯಾನೇಜ್ಮೆಂಟ್ ತರಬೇತಿ ಕೋರ್ಸ್ ಗಳನ್ನು ನೀಡುತ್ತಿದೆ. ಕೋರ್ಸ್ ಮುಕ್ತಾಯಗೊಂಡ ನಂತರ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಪಡೆಯುವಂತೆ ಇಂಜಿನಿಯರ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಭಾರತದ ಗುಪ್ತಚರ ಇಲಾಖೆ ಹೇಳಿದೆ.
ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬನಾಗಿರುವ ಅಬ್ದುಲ್ ರೆಹ್ಮಾನ್ ಮಕ್ಕಿ ಗೆ ಕೋರ್ಸ್ ನ ಜವಾಬ್ದಾರಿ ನೀಡಲಾಗಿದೆ. ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಗಿಟ್ಟಿಸುವ ಉದ್ದೇಶದಿಂದ ಹಾಗೂ ಬರುವ ವೇತನದಲ್ಲಿ ಒಂದಷ್ಟು ಭಾಗವನ್ನು ಭಾರತದ ಮೇಲೆ ದಾಳಿ ನಡೆಸಲು ಸಹಕಾರಿಯಗುವಂತೆ ಉಗ್ರ ಸಂಘಟನೆಗೆ ನೀಡುವುದು ಕೋರ್ಸ್ ನ ಮೂಲ ಉದ್ದೇಶವಾಗಿದೆ. ಸುಮಾರು 300 ಜನ ಇಂಜಿನಿಯರ್ ಗಳಿಗೆ ಚೀನಾ-ಪಾಕಿಸ್ತಾನ ಎಕಾನಾಮಿಕ್ ಕಾರಿಡಾರ್ ಯೋಜನೆಯಲ್ಲಿ ಕೆಲಸ ಪಡೆಯುವಂತೆ ಸೂಚಿಸಲಾಗಿದೆ.