ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಬಂಧ! 
ವಿದೇಶ

ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಂಧ!

ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ.

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಪಾಕಿಸ್ತಾನ ಸರ್ಕಾರ ಅನುಮತಿ ನಿರಾಕರಿಸಿದೆ. 
ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಮುಂಚೆಯೇ ಎಲ್ಲಾ ಅನುಮತಿಗಳನ್ನು ಪಡೆದುಕೊಂಡಿದ್ದರೂ ಸಹ ಅಜಯ್ ಬಿಸಾರಿಯಾ ಹಾಗೂ ಅವರ ಪತ್ನಿಗೆ ಅನುಮತಿ ನಿರಾಕರಿಸಲಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಪಾಕಿಸ್ತಾನದ ವಿದೇಶಾಂಗ ಇಲಾಖೆಯೊಂದಿಗೆ ವಿಷಯ ಪ್ರಸ್ತಾಪಿಸಿದೆ. 
ಸಿಖ್ ಸಮುದಾಯದವರು ಬೈಸಖಿ ಹಬ್ಬಕ್ಕೆ ತೆರಳಿದ್ದಾಗ ಭಾರತೀಯ ಅಧಿಕಾರಿಗಳಿಗೆ ಶಿಷ್ಟಾಚಾರ ಪಾಲನೆ ಮಾಡಲು ಬಿಡದೇ ಪಾಕಿಸ್ತಾನ ಇದೇ ರೀತಿಯ ವರ್ತನೆ ತೋರಿತ್ತು. ಇದಾದ ಕೆಲವೇ ತಿಂಗಳುಗಳಲ್ಲಿ ಪಾಕಿಸ್ತಾನ ಮತ್ತೆ ಭಾರತೀಯ ಅಧಿಕಾರಿ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಲು ಅನುಮತಿ ನಿರಾಕರಿಸಿದೆ. 
ಇಟಿಪಿಬಿಯ ಅಧ್ಯಕ್ಷರ ಆಹ್ವಾನದ ಮೇರೆಗೆ ಗುರುದ್ವಾರ ಪಂಜಾ ಸಾಹಿಬ್ ಗೆ ತೆರಳಬೇಕಿತ್ತು. ಆದರೆ ಮಾರ್ಗಮಧ್ಯದಲ್ಲೇ ಅವರನ್ನು ವಾಪಸ್ ಕರೆಸಿಕೊಂಡು ಭದ್ರತಾ ಕಾರಣಗಳನ್ನು ನೀಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video