ಸಾಂದರ್ಭಿಕ ಚಿತ್ರ 
ವಿದೇಶ

ಅಪ್ರಚೋದಿತ ಗುಂಡಿನ ದಾಳಿ: ಭಾರತೀಯ ರಾಯಬಾರಿಗೆ ಪಾಕ್ ಸಮನ್ಸ್

ಭಾರತ ನಿರಂತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು, ಭಾರತದ ಉಪ ಹೈ ಕಮಿಷನರ್ ಜೆ. ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಸಮನ್ಸ್ ಜಾರಿಗೊಳಿಸಿದೆ.

ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಭಾರತ ನಿರಂತವಾಗಿ  ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ್ದು,  ಭಾರತದ ಉಪ ಹೈ ಕಮಿಷನರ್ ಜೆ. ಪಿ. ಸಿಂಗ್ ಅವರಿಗೆ ಪಾಕಿಸ್ತಾನ ಸಮನ್ಸ್ ಜಾರಿಗೊಳಿಸಿದೆ.

 ಬಿಂಬರ್ ಮತ್ತು ಸಾಮಹಿನಿ ವಲಯದಲ್ಲಿ ನಿನ್ನೆ ದಿನ  ಭಾರತೀಯ ಸೇನಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿರುವುದು  ಖಂಡನಾರ್ಹವಾಗಿದೆ ಎಂದು ಪಾಕಿಸ್ತಾನದ  ವಿದೇಶಾಂಗ ವ್ಯವಹಾರ ಅಧಿಕಾರಿ ಮೊಹಮ್ಮದ್ ಪೈಸಲ್,ಆರೋಪಿಸಿದ್ದು, ಸಿಂಗ್ ಅವರಿಗೆ ಸಮನ್ಸ್ ಜಾರಿ ಗೊಳಿಸಿದ್ದಾರೆ.

ಭಾರತದಿಂದ ದಾಳಿಯಿಂದ ಹಲವು ನಾಗರಿಕರು ಹತ್ಯೆಯಾಗಿದ್ದು, ಅವರ ಹೆಂಡತಿ, ಮಕ್ಕಳು ಗಾಯಗೊಂಡಿದ್ದಾರೆ ಎಂದು  ಹೇಳಿದ್ದಾರೆ.

ಭಾರತ 1970ರ ಕದನ ವಿರಾಮ ಉಲ್ಲಂಘಿಸಿದ್ದು, 2017ರಿಂದ ಸತತವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿದೆ ಎಂದು ಮೊಹಮ್ಮದ್ ಪೈಸಲ್   ಆರೋಪಿಸಿದ್ದಾರೆ.

2003ರ ಕದನ ವಿರಾಮ ಒಪ್ಪಂದವನ್ನು ಗೌರವಿಸುವಂತೆ ಹಾಗೂ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಶಾಂತಿ ಕಾಪಾಡುವಂತೆ ಪಾಕಿಸ್ತಾನ ಭಾರತವನ್ನು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!