ವಾಷಿಂಗ್ಟನ್ : ಹೆಚ್-1 ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನಿರ್ಧಾರ ಕುರಿತು ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕಾ ಸರ್ಕಾರ ವಿಳಂಬ ಮಾಡುತ್ತಿದೆ.
ಈ ವೀಸಾಕ್ಕೆ ಮಾನ್ಯತೆ ದೊರೆತರೆ ಭಾರತದ ಅನೇಕ ನೌಕರರು ಹಾಗೂ ಅವರ ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಂತಾಗುತ್ತದೆ.
ಹೆಚ್ 4 ಹಾಗೂ ಹೆಚ್-1ಬಿ ವೀಸಾ ಹೊಂದಿರುವವರ ಪತಿ ಅಥವಾ ಪತ್ನಿಗೆ ಮಾನ್ಯತೆ ನೀಡುವುದರಿಂದ ಆರ್ಥಿಕತೆ ಮೇಲೆ ಆಗುವ ಪರಿಣಾಮ ಪರಾಮರ್ಶನೆಗಾಗಿ ಜೂನ್ ವರೆಗೂ ಕಾಲಾವಕಾಶ ನೀಡುವಂತೆ ಭದ್ರತಾ ಇಲಾಖೆ-ಡಿಹೆಚ್ಎಸ್ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
ಅಮೆರಿಕಾದಲ್ಲಿ ಕೆಲಸ ಮಾಡಲು ಅನುಕೂಲವಾಗುವ ಹಸಿರು ಕಾರ್ಡ್ ಪಡೆಯಲು ಹೆಚ್-1ಬಿ ವೀಸಾದಾರರು 2015ರಿಂದಲೂ ಕಾಯುತ್ತಿದ್ದಾರೆ. ಇದನ್ನು ಒಬಾಮಾ ಸರ್ಕಾರದ ಅವಧಿಯಲ್ಲಿ ಪರಿಚಯಿಸಲಾಗಿ್ತ್ತು.
ಹೆಚ್ -1ಬಿ ವೀಸಾ ಭಾರತ ಮತ್ತು ಚೀನಾದಿಂದ ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುವ ಪ್ರತಿಭಾವಂತ ನೌಕರರನ್ನು ಆಕರ್ಷಿಸಿದೆ. ಈ ವೀಸಾಕ್ಕೆ ಮಾನ್ಯತೆ ದೊರೆತರೆ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ನೌಕರರಿಗೆ ಅನುಕೂಲವಾಗಲಿದೆ.
ಈ ವಿಚಾರದಲ್ಲಿ ಡಿಹೆಚ್ ಎಸ್ ಒಳ್ಳೆಯ ತೀರ್ಮಾನ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂಬುದಾಗಿ ಕ್ಯಾಲಿಪೋರ್ನಿಯಾದಲ್ಲಿರುವ ಅನಿವಾಸಿ ಭಾರತಿಯ ಉದ್ಯಮಿ ಜಾನ್ಸಿ ಕುಮಾರ್ ತಿಳಿಸಿದ್ದಾರೆ.